ಬಂಟ್ವಾಳ : ಕರಾವಳಿ ಕಲೋತ್ಸವ ಜನವರಿ 26 ರಿಂದ ನಡೆಯಲಿದೆ. ಆ ಸಮಯದಲ್ಲಿ ಬಂಟ್ವಾಳ ತಾಲ್ಲೂಕು ನರಿಕೊಂಬು ಗ್ರಾಮದ ಬೋಳಂತೂರಿನ ದ.ಕ.ಜಿಪಂ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯನ್ನು ಚಿಣ್ಣರ ಲೋಕ ಸೇವಾ ಬಂಧು ಬಂಟ್ವಾಳ ವತಿಯಿಂದ ದತ್ತು ಸ್ವೀಕರಿಸಲಾಗುವುದು ಎಂದು ಸಂಚಾಲಕ ಮೋಹನದಾಸ ಕೊಟ್ಟಾರಿ ತಿಳಿಸಿದ್ದಾರೆ.
ಜ. 20 ರಿಂದ ಫೆ. 8 ರವರೆಗೆ ಕಾರ್ಯಕ್ರಮ ನಡೆಯಲಿದೆ. ಕಲೋತ್ಸವ ಅಧ್ಯಕ್ಷರಾಗಿ ಸುದರ್ಶನ ಜೈನ್, ಚಿಣ್ಣರ ಅಧ್ಯಕ್ಷರಾಗಿ ಸಾನ್ವಿ ಶೆಟ್ಟಿ ಉಪಸ್ಥಿತರಿರುವರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಚಿಣ್ಣರ ಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಮತ್ತು ಚಿಣ್ಣರ ಲೋಕ ಸೇವಾ ಬಂಧು ಬಂಟ್ವಾಳ ಆಶ್ರಯದಲ್ಲಿ ನಡೆಯುವ ಕಾರ್ಯಕ್ರಮವು ಬಿ.ಸಿ.ರೋಡಿನ ಗೋಲ್ಡನ್ ಪಾರ್ಕ್ ಮೈದಾನದಲ್ಲಿ ಆಯೋಜಿಸಲಾಗಿದೆ.
ಈ
ಸಂದರ್ಭದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಅವರಿಗೆ ಕರಾವಳಿ ಸೌರಭ ರಾಜ್ಯ ಪ್ರಶಸ್ತಿ ಪ್ರದಾನ, ಅಂತರಾಷ್ಟ್ರೀಯ ಕಬಡ್ಡಿ ಪಟು ಪ್ರಶಾಂತ ರೈ ಕೈಕಾರ ಅವರಿಗೆ ಉದಯ ಚೌಟ ಸಾಧನಾ ಪ್ರಶಸ್ತಿ ಪ್ರದಾನ ಮತ್ತು ಕ್ರೀಡಾ ,ನೃತ್ಯನಿರೂಪಣೆ ಮತ್ತು ಸಂಗೀತ ಕ್ಷೇತ್ರದ ಸಾಧನೆಗೆ ಚಿಣ್ಣರ ಸೌರಭ ರಾಜ್ಯಪ್ರಶಸ್ತಿ ಶ್ರೀ. ನಿಧಿ ಬಿ.ಸಿರೋಡ್ ಇವರಿಗೆ ಪ್ರದಾನ ಮಾಡಲಾಗುವುದು.














