Coastal Bulletin

ಲಖನೌ : ಉತ್ತರಪ್ರದೇಶದಲ್ಲಿ ಬಾರೀ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಇಬ್ಬರು ಅಲ್ ಖೈದಾ ಶಂಕಿತ ಉಗ್ರರನ್ನು ಭಯೋತ್ಪಾದನಾ ನಿಗ್ರಹ ದಳ ಪೋಲೀಸರು ಬಂಧಿಸಿದ್ದಾರೆ.ಮಿನಾಜ್ ಅಹ್ಮದ್ ಹಾಗೂ ನಾಸಿರುದ್ದೀನ್ ಅಕಾ ಮುಶೀರ್ ಬಂಧಿತರಾಗಿದ್ದು ಇಬ್ಬರೂ ಲಕ್ನೋ ದ ಕಕೋರಿ ಪ್ರದೇಶದ ನಿವಾಸಿಗಳಾಗಿದ್ದಾರೆ.

ಲಖನೌದಲ್ಲಿರುವ ಕಾಕೋರಿಯ ರಿಂಗ್ ರಸ್ತೆಯ ಬಳಿಯ ದುಬಗ್ಗ ಪ್ರದೇಶದಲ್ಲಿನ ಮನೆಯೊಂದರ ಮೇಲೆ ದಾಳಿ ನಡೆಸಿದ‌ ಎಟಿಎಸ್  ಅಧಿಕಾರಿಗಳು ಸರಣಿ ಆತ್ಮಹತ್ಯಾ ದಾಳಿಗೆ ಮುಂದಾಗಿದ್ದ ಉಗ್ರಪಡೆಯ ಜಾಲವನ್ನು ಭೇದಿಸಿ ಸಜೀವ ಬಾಂಬ್,ಶಸ್ತ್ರಾಸ್ತ್ರ ಸೇರಿದಂತೆ ಇಬ್ಬರು ಶಂಕಿತ ಉಗ್ರರನ್ನು ವಶಕ್ಕೆ ಪಡೆದಿದ್ದಾರೆ.ಕಾರ್ಯಾಚರಣೆ ವೇಳೆ ನಾಲ್ವರು ಪರಾರಿಯಾಗಿದ್ದು ಅವರನ್ನು ಹಿಡಿಯಲು ಬಲೆ ಬೀಸಲಾಗಿದೆ ಎಂದು ಎಡಿಜಿಪಿ ಪ್ರಶಾಂತ್

ಕುಮಾರ್ ಹೇಳಿದ್ದಾರೆ.


ಇವರು ಅಲ್ ಖೈದಾ ಪ್ರೇರಿತ ಅನ್ಸಾರ್ ಖಜ್ವಾತ್ ಉಲ್ ಹಿಂದೂ ಸಂಘಟನೆಯ ಆತ್ಮಾಹುತಿ ದಾಳಿಯ ಸದಸ್ಯರು ಎಂದು ಶಂಕಿಸಲಾಗಿದೆ.ಉಗ್ರರಿಂದ ಎರಡು ಪ್ರೆಶರ್-ಕುಕ್ಕರ್ ಬಾಂಬ್‍ಗಳು, ಅರೆ ತಯಾರಿಸಿದ ಟೈಮ್ ಬಾಂಬ್ ಮತ್ತು ಆರರಿಂದ ಏಳು ಕಿಲೋಗ್ರಾಂಗಳಷ್ಟು ಸ್ಫೋಟಕಗಳನ್ನು ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಎಟಿಎಸ್ ಮೂಲಗಳು ತಿಳಿಸಿವೆ.

Leave a Comment