ನಟ ಸುದೀಪ್ ವಿರುದ್ದ ದೂರು ಬಂದಿದೆ; ದೂರು ಕಮಿಷನರ್​​ಗೆ ಕಳುಹಿಸಿದ್ದೇನೆ: ನಾಗಲಕ್ಷ್ಮಿ ಚೌಧರಿ

Coastal Bulletin
ನಟ ಸುದೀಪ್ ವಿರುದ್ದ ದೂರು ಬಂದಿದೆ; ದೂರು ಕಮಿಷನರ್​​ಗೆ ಕಳುಹಿಸಿದ್ದೇನೆ: ನಾಗಲಕ್ಷ್ಮಿ ಚೌಧರಿ

ಶಿವಮೊಗ್ಗ :ನಟ ಸುದೀಪ್ ವಿರುದ್ದ ನಮಗೆ ದೂರು ಬಂದಿದೆ. ಈ ದೂರನ್ನು ಕಮಿಷನರ್​​ ಅವರಿಗೆ ಕಳುಹಿಸಿದ್ದೇನೆ. ಅವರು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ನಾಗಲಕ್ಷ್ಮಿ ಚೌಧರಿ ತಿಳಿಸಿದ್ದಾರೆ. ಜಿಲ್ಲೆಯ ಎರಡು ದಿನದ ಪ್ರವಾಸ ಕೈಗೊಂಡಿರುವ ಇವರು ಮೊದಲನೇ ದಿನ ಶಿವಮೊಗ್ಗ ಮೆಗ್ಗಾನ್ ಭೋಧಾನಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು. ಈ ವೇಳೆ ಬಿಗ್​ಬಾಸ್ ನಿರೂಪಣೆ ವೇಳೆ ನಟ ಸುದೀಪ್ ಮಾತನಾಡಿದ್ದಾರೆ ಎನ್ನಲಾದ ವಿಚಾರವಾಗಿ ಮಹಿಳಾ ಆಯೋಗಕ್ಕೆ ದೂರು ಬಂದ ಕುರಿತು ನಾಗಲಕ್ಷ್ಮಿ ಚೌಧರಿ ಪ್ರತಿಕ್ರಿಯೆ ನೀಡಿದರು. ನಟ ಸುದೀಪ್ ವಿರುದ್ದ ಬಂದ ದೂರನ್ನು ಆಯುಕ್ತರಿಗೆ ಕಳುಹಿಸಿದ್ದೇನೆ ಎಂದರು.

ನಾನು ಆಸ್ಪತ್ರೆಯ ಎಲ್ಲ ವಿಭಾಗಗಳಿಗೆ ಭೇಟಿ ನೀಡಿದ್ದೇನೆ. ಸಾಕಷ್ಟು ತಾಯಂದಿರ ಹತ್ತಿರ ಮಾತನಾಡಿದ್ದೇನೆ. ಡೆಲಿವರಿ ವಿಭಾಗದಲ್ಲಿ ಹಾಗೂ ತಾಯಿ ಮಗುವಿನ ವಾರ್ಡ್​ನಲ್ಲಿ ದುಡ್ಡು ಕೇಳುವುದು ಸಹಜ ಎಂಬ ಮಾತು ಕೇಳುತ್ತಿದೆ. ಹಾಗಾಗಿ, ನಾನು ಪ್ರತಿಯೊಂದು ಪೇಷೆಂಟ್ ಜೊತೆ ಮಾತನಾಡುತ್ತೇನೆ. ಮಗು ತಂದು ಕೊಟ್ಟಾಗ ದುಡ್ಡು ತೆಗೆದುಕೊಳ್ಳುತ್ತಾರಾ? ಎಂದು ಕೇಳಿದ್ದೇನೆ. ಅದಕ್ಕೆ ಒಳಗಿನ ಎಲ್ಲಾ ಪೇಷೆಂಟ್​ಗಳು ನಾವು ಯಾರೂ ದುಡ್ಡು ಕೊಡಲಿಲ್ಲ ಎಂದಿದ್ದಾರೆ. ಆದರೆ, ಆಚೆಕಡೆ ಗಂಡು ಮಗುವಿಗೆ 2,500 ಹಾಗೂ ಹೆಣ್ಣು ಮಗುವಿಗೆ 1,500 ರೂ ನೀಡಬೇಕೆಂದು ಹೇಳಿದ್ರು. ಆದರೆ, ನಾನು ಪೇಷಂಟ್​​ಗಳನ್ನು ಕೇಳಿದಾಗ ಯಾರೂ ಹೇಳಲಿಲ್ಲ ಎಂದಿದ್ದಾರೆ

ಪೇಷಂಟ್ಗಳನ್ನು ಡಾಕ್ಟರ್ ಹೇಗೆ ನೋಡಿಕೊಳ್ಳುತ್ತಾರೆ ಎಂದು ಕೇಳಿದಾಗ, ಪೇಷಂಟ್ಗಳು ಯಾವುದೇ ಕಂಪ್ಲೇಂಟ್ ಮಾಡಲಿಲ್ಲ. ಆದರೆ, ಆಚೆ ಕಡೆ ಸರತಿ ಸಾಲು ನೋಡಿದ್ದೇನೆ. ಅದು ಬಹಳ ದುರಂತ. ಒಂಬತ್ತು, ಏಳು, ಎಂಟು ತಿಂಗಳಿನ ಗರ್ಭಿಣಿಯರು ತಾಯಿಯಂದಿರು, ಮಕ್ಕಳನ್ನು ಎತ್ತಿಕೊಂಡಿರುವವರು ಬೆಳಗ್ಗೆ 9 ಗಂಟೆಯಿಂದ 11 ಗಂಟೆವರೆಗೂ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಹಾಗೆ ಆಗಬಾರದು ಎಂದು ಹೇಳಿದ್ದಾರೆ.

ತಾಯಿ ಹಾಗೂ ಮಗುವಿನ ಆಸ್ಪತ್ರೆಯಲ್ಲಿ ಮೂರಲ್ಲ, 10 ಕೌಂಟರ್ ಮಾಡಿ. ಆದರೆ, ಆ ದುಃಸ್ಥಿತಿ ಬರಬಾರದು. ನಾಳೆ ನಾನು ಡಿಸಿ ಕಚೇರಿಯಲ್ಲಿ ರಿವಿವ್ಯೂ ತೆಗೆದುಕೊಳ್ಳುವ ಮುಂಚಿತವಾಗಿ

ಕೌಂಟರ್ ಆಗಬೇಕು. ಇನ್ನು ಮುಂದೆ ಹಾಗೆ ನಡೆಯಬಾರದು. ಹೆಚ್ಚಿನ ಕೌಂಟರ್ ತೆರೆಯದೇ ಹೋದ್ರೆ ಕ್ರಮ ಜರುಗಿಸಬೇಕಾಗುತ್ತದೆ. ಈ ರೀತಿಯ ಘಟನೆಯನ್ನು ನಾನು ಒಬ್ಬ ತಾಯಿಯಾಗಿ, ಮಹಿಳಾ ಆಯೋಗದ ಅಧ್ಯಕ್ಷೆಯಾಗಿ ಸಹಿಸುವುದಿಲ್ಲ ಎಂದಿದ್ದಾರೆ.

ಇಲ್ಲಿ ಬಾಣಂತಿಯರಿಗೆ ಕುಡಿಯುವ ನೀರು, ಬಿಸಿ ನೀರು ಎಲ್ಲವೂ ಸಿಗುತ್ತಿದೆ. ಆದರೆ, ಈ ಆಸ್ಪತ್ರೆಯಲ್ಲಿ ಹೊರಗುತ್ತಿಗೆಯಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಪ್ರತಿ ತಿಂಗಳು ಸರಿಯಾಗಿ ಸಂಬಳ ಆಗುತ್ತಿಲ್ಲ. ಅಲ್ಲದೇ, ಪಿಎಫ್ ಹಾಗೂ ಇಎಸ್ಐ ಸರಿಯಾಗಿ ಸಿಗುತ್ತಿಲ್ಲ ಎಂದು ಮಹಿಳೆಯರು ತಿಳಿಸಿದ್ದಾರೆ. ಇದರಿಂದ ಮಹಿಳೆಯರಿಗೆ ಸರಿಯಾಗಿ ಸಂಬಳ, ಪಿಎಫ್ ಹಾಗೂ ಇಎಸ್ಐ ನೀಡದೇ ಹೋದ್ರೆ ಅಂತಹ ಕಂಪನಿಗಳನ್ನು ಬ್ಲಾಕ್ ಲಿಸ್ಟ್ಗೆ ಹಾಕಿ ಎಂದು ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ.

ಆಸ್ಪತ್ರೆಯಲ್ಲಿ ಎಷ್ಟು ಹೆರಿಗೆ ಆಗುತ್ತದೆ ಎಂಬ ಮಾಹಿತಿ ಪಡೆದುಕೊಂಡಿದ್ದೇನೆ. ಇಲ್ಲಿ ಸಹಜ ಹೆರಿಗೆ ಹಾಗೂ ಶಸ್ತ್ರ ಚಿಕಿತ್ಸೆಯ ಮೂಲಕ ಎಷ್ಟು ಹೆರಿಗೆ ಆಗುತ್ತದೆ ಎಂಬ ಮಾಹಿತಿ ಪಡೆದುಕೊಂಡಿದ್ದೇನೆ. ಇಲ್ಲಿಗೆ ಎರಡನೇ ಹೆರಿಗೆ ಆದಾಗ ಹುಟ್ಟಿದ ಎರಡನೇ ಹೆಣ್ಣು ಮಗುವಿಗೆ ಸುಕನ್ಯ ಸಂಮೃದ್ದಿ ಯೋಜನೆ ಮಾಡಿಸುವ ಜವಾಬ್ದಾರಿ ಇರುತ್ತದೆ ಎಂದರು. ಇಲ್ಲಿ ಆಸ್ಪತ್ರೆಯ ಆಪರೇಷನ್ ಕೊಠಡಿಯನ್ನು ಶುದ್ದ ಮಾಡುವ ಕುರಿತು ಸೂಚಿಸಿದ್ದೇನೆ ಎಂದಿದ್ದಾರೆ.

ಶಿವಮೊಗ್ಗದಲ್ಲಿ ಬಾಲ್ಯ ವಿವಾಹ ಹೆಚ್ಚು ಹೊರಗೆ ಬರುತ್ತಿರುವುದಕ್ಕೆ ಇದರ ಬಗೆಗಿನ ಅರಿವು ಹೆಚ್ಚಾಗುತ್ತಿರುವುದೇ ಕಾರಣ ಎಂದು ತಿಳಿಸಿದ್ದಾರೆ.

Leave a Comment