Coastal Bulletin

ಬೆಂಗಳೂರು;ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಎಸೆದಿದ್ದ ಪ್ರಕರಣ ಸಂಬಂಧಿಸಿ ಕುಶಾಲನಗರ ಪೊಲೀಸರು 9 ಮಂದಿಯನ್ನು ಬಂಧಿಸಿದ್ದಾರೆ.

ಮಳೆ ಹಾನಿ ಬಗ್ಗೆ ವೀಕ್ಷಿಸಲು ಸಿದ್ದರಾಮಯ್ಯ ಅವರು ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಗುಡ್ಡೆಹೊಸೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರ ಕಾರಿಗೆ ಕೆಲವರು ಮೊಟ್ಟೆ ಎಸೆದಿದ್ದರು.ಹಲವೆಡೆ ಬಿಜೆಪಿಯ ಕಾರ್ಯಕರ್ತರು ಗುಂಪು ಸೇರಿ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಿದ್ದರು.

ಈ ಕುರಿತು‌ ಸ್ವಯಂಪ್ರೇರಿತ

ಪ್ರಕರಣ ದಾಖಲಿಸಿಕೊಂಡಿದ್ದ ಕುಶಾಲನಗರ ಪೊಲೀಸರು ಇದೀಗ 9 ಮಂದಿ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿದ್ದಾರೆ.

ಮುಸ್ಲಿಂ ರ ಏರಿಯಾಗಳಲ್ಲಿ ಸಾವರ್ಕರ್ ಫೋಟು ಯಾಕೆ ಅಳವಡಿಕೆ ಮಾಡುತ್ತೀರ ಎಂದು ಬಿಜೆಪಿಗರನ್ನು ಸಿದ್ದು ಪ್ರಶ್ನಿಸಿದ್ದರು ಇದೇ ಕಾರಣಕ್ಕೆ ಕಾಂಗ್ರೆಸ್ ನಾಯಕನಿಗೆ ತಾನು ಹೋದದ್ದೆಲ್ಲ ಪ್ರತಿಭಟನೆಯ ಬಿಸಿ ತಟ್ಟುತ್ತಿದೆ.

Leave a Comment