ಬಾಗಲಕೋಟೆ : ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ನೀರುಕೇರಿ ಗ್ರಾಮದಲ್ಲಿ ಯೋಧನೊಬ್ಬನನ್ನು ಚೂರಿಯಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಮೃತಪಟ್ಟ ವ್ಯಕ್ತಿ ಯೋಧ ಕರಿಸಿದ್ದಪ್ಪ ಎಂದು ಗುರಿತಿಸಲಾಗಿದೆ. ಕರಿಸಿದ್ದಪ್ಪ ಅವರ ಬಾಮೈದ ಹತ್ಯೆ ನಡೆಸಿದ್ದಾನೆ.
ಕರಿಸಿದ್ದಪ್ಪ ವಿದ್ಯಾ ಎಂಬವರನ್ನು ಪ್ರೀತಿಸಿ ಮದುವೆಯಾಗಿದ್ದ, ರಜೆಗೆ ಬಂದ ಕರಿಸಿದ್ದಪ್ಪ ಮತ್ತು ವಿದ್ಯಾನಿಗೆ ಊಟದ ವಿಚಾರದಲ್ಲಿ ಜಗಳವಾಗಿತ್ತು.
ಈ ವಿಷಯವನ್ನು ವಿದ್ಯಾ ಅಣ್ಣನಿಗೆ ತಿಳಿಸಿದ್ದಾಳೆ. ಇದರಿಂದ ಇಬ್ಬರಿಗೂ ಜಗಳವಾಯಿತು. ಆಗ ಬಾಮೈದ ಚೂರಿಯಿಂದ ಇರಿದು ಹತ್ಯೆ ಮಾಡಿದ್ದಾನೆ ಎಂದು ವರದಿಯಾಗಿದೆ. ಈ ವಿಷಯವಾಗಿ ಕೆರೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
















