Coastal Bulletin

ಕೋವಿಡ್ ಕಠಿಣ ನಿಯಮಗಳು, ವಾರಾಂತ್ಯದ ಕರ್ಫ್ಯೂ ಸೇರಿದಂತೆ ಎಲ್ಲಾ ನಿಯಮಗಳನ್ನು ಮರೆತು ಮಾಸ್ಕ್ ಮತ್ತು ಅಂತರ ಕಾಯ್ದಕೊಳ್ಳದೆ ಪಾದಾಯಾತ್ರೆ ಯಲ್ಲಿ ರಾಜಕೀಯ ನಾಯಕರು ಪಾಲ್ಗೊಂಡರು. ಮುಖ್ಯವಾಗಿ ಪಾದಯಾತ್ರೆ ನೇತೃತ್ವ ವಹಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮಾಸ್ಕ್ ಧರಿಸದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ಮಾತ್ರವಲ್ಲದೆ ಹಲವು ಕಾರ್ಯಕರ್ತರು ಮಾಸ್ಕ್ ಧರಿಸದೇ ಕಾರ್ಯಕ್ರಮದಲ್ಲಿದ್ದರು. ಮೇಕೆದಾಟುವಿನಿಂದ ಬೆಂಗಳೂರು ತನಕ 11 ದಿನಗಳ ಕಾಲ ಸುಮಾರು 160 ಕಿ. ಮೀ. ಪಾದಯಾತ್ರೆ ನಡೆಯಲಿದೆ. ರಾಜಕೀಯ ನಾಯಕರಿಗೆ ಒಂದು ನಿಯಮ, ಜನ ಸಾಮಾನ್ಯರಿಗೆ ಒಂದು ನಿಯಮ ಎಂಬುದು ಕಾಂಗ್ರೆಸ್ ಪಾದಯಾತ್ರೆ ಮೂಲಕ ಮತ್ತೆ ಸಾಬೀತಾಯಿತು. 

ಪಾದಯಾತ್ರೆಯನ್ನುದ್ದೇಶಿಸಿ ಮಾತನಾಡಿದ್ದ ಡಿ.ಕೆ.ಶಿವಕುಮಾರ್ ಸರಕಾರ ಹಾಗೂ ಪೊಲೀಸರಿಗೆ ತಾಕತ್ತಿದ್ದರೆ ನಮ್ಮನ್ನು ತಡೆಯಲಿ ಎಂದು ಸವಾಲೆಸೆದರು. ಆದರೆ ಆಡಳಿತ ಸರಕಾರದ ನಾಯಕರು  ಪಾದಯತ್ರೆಯನ್ನು ನಾವು ತಡೆಯುವುದಿಲ್ಲ ಎಂದು ಹೇಳಿಕೆಯನ್ನೂ

ಕೊಟ್ಟಿದ್ದಾರೆ. 

ಒಟ್ಟಾರೆಯಾಗಿ ಕನಿಷ್ಠ ಮಸ್ಕ್ ಧರಿಸದ ಸಾಮಾನ್ಯ ಜನರಿಗೆ ದಂಡ ವಿಧಿಸುವ ಸರಕಾರ ಕಾಂಗ್ರೆಸ್ ನ ಬೃಹತ್ ಪಾದಾಯಾತ್ರೆಗೆ ಅನುಕೂಲಕರವಾದ ವಾತಾವರಣ ಸೃಷ್ಟಿ ಮಾಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Leave a Comment