ಬೆಂಗಳೂರು : ಅಶ್ಲೀಲ ವಿಡಿಯೋ ಎಡಿಟ್ ಮಾಡಿ ಹಣಕ್ಕೆ ಬೆದರಿಕೆಯೊಡ್ಡುವ ಪ್ರಕರಣ ಬೆಳಕಿಗೆ ಬಂದಿದೆ. ಸಚಿವ ಸೋಮಶೇಖರ್ ಪುತ್ರ ನಿಶಾಂತ್ ಸೋಮಶೇಖರ್ ದೌರ್ಜನ್ಯಕ್ಕೊಳಗಾದವರು.
ಬೆಂಗಳೂರಿನ ಪ್ರತಿಷ್ಟಿತ ಜ್ಯೋತಿಷಿ ಚಂದ್ರಶೇಖರ್ ಅವರ ಪುತ್ರ ರಾಹುಲ್ ಭಟ್ ನನ್ನು ಸಿಸಿಬಿ ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಸಚಿವರ ಪುತ್ರನಿಗೆ ಅಶ್ಲೀಲ ವಿಡಿಯೋ ರವಾನಿಸಿ
ವಿವಿಧ ಫೋನ್ ನಂಬರ್ ಗಳಿಂದ ಹಣದ ಬೇಡಿಕಯೊಡ್ಡಿದ್ದು ಇದೀಗ ಪ್ರಕರಣ ಪೊಲೀಸರ ಮೆಟ್ಟಿಲೇರಿದೆ.ಶಂಕಿತ ಆರೋಪಿ ರಾಹುಲ್ ನನ್ನು ಬಂಧಿಸುತ್ತಿದ್ದಂತೆ ಮನೆಯವರು ಕೂಡ ಇದೀಗ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.













