ಬೆಂಗಳೂರು: ಅಯೋಧ್ಯಾ ರಾಮಮಂದಿರ ವಿಚಾರವಾಗಿ ರಾಜ್ಯದಲ್ಲಿ ಕೋಮುಗಲಭೆ ಸೃಷ್ಟಿಸೋ ಸಂಚು ಮಾಡಿದ್ದಾರೆ ಎಂದು ಆರೋಪಿಸಿ ಹಿಂದೂ ಪರ ಸಂಘಟನೆ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ವಿರುದ್ಧ ಕಾಂಗ್ರೆಸ್ ದೂರು ದಾಖಲು ಮಾಡಿತ್ತು. ವಾಟ್ಸಾಪ್‌ನಲ್ಲಿ ಪುನೀತ್ ಕೆರೆಹಳ್ಳಿ ಮೆಸೇಜ್ ಸ್ಕ್ರೀನ್ ಶಾಟ್ ಹರಿದಾಡಿದ್ದು, ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ಬಿಕೆ ಹರಿಪ್ರಸಾದ್ ಪುನೀತ್ ಕೆರೆಹಳ್ಳಿ ವಿರುದ್ಧ ಗಂಭೀರವಾಗಿ ಆರೋಪಿಸಿದ್ದರು. ಅಲ್ಲದೇ ಕಾಂಗ್ರೆಸ್ ಐಟಿ ಘಟಕ ಪುನೀತ್ ಕೆರೆಹಳ್ಳಿ ವಿರುದ್ಧ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದರು. ಇದೀಗ ಬಿಕೆ ಹರಿಪ್ರಸಾದ್ ಅವರು ಸುಳ್ಳು ಸುದ್ದಿ ಹಬ್ಬುತ್ತಿರುವುದಾಗಿ ಅವರ ವಿರುದ್ಧ ದೂರು ನೀಡಲು ಮುಂದಾಗಿದ್ದಾರೆ. ಆದರೆ ಬೆಂಗಳೂರಿನ ಬಸವನಗುಡಿ ಠಾಣೆ ಪೊಲೀಸರು ದೂರು ಸ್ವೀಕರಿಸಲು ನಿರಾಕರಿಸಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ ಮೇಲ್ಮನೆ ಸದಸ್ಯ ಬಿಕೆ ಹರಿಪ್ರಸಾದ್ ವಿರುದ್ಧ ಪುನೀತ್ ಕೆರೆಹಳ್ಳಿ ದೂರು ನೀಡಿದ್ದಾರೆ. ಬಸವನಗುಡಿ ಪೊಲೀಸ್ ಠಾಣೆಗೆ ಆಗಮಿಸಿದ ಪುನೀತ್ ಕೆರೆಹಳ್ಳಿ, ಹರಿಪ್ರಸಾದ್ ವಿರುದ್ಧ ದೂರು ನೀಡಲು ಮುಂದಾಗಿದ್ದಾರೆ.
ಗಲಭೆ ಸೃಷ್ಟಿಸಲು ಸಂಚು ರೂಪಿಸಲಾಗಿದೆ ಎಂದು ಪುನೀತ್ ಕೆರೆಹಳ್ಳಿ ವಿರುದ್ಧ ಬಿ.ಕೆ. ಹರಿಪ್ರಸಾದ್ ಆರೋಪಿಸಿದ್ದರು. ಹೀಗಾಗಿ ಬಿ.ಕೆ. ಹರಿಪ್ರಸಾದ್ ಹೇಳಿಕೆ ವಿರುದ್ಧ ಕ್ರಮ ಜರಗಿಸಬೇಕೆಂದು ದೂರು ಪುನೀತ್ ಕೆರೆಹಳ್ಳಿ ನೀಡಲು ಮುಂದಾಗಿದ್ದರು. ಬೆಂಗಳೂರಿನ ಬಸವನಗುಡಿ ಪೊಲೀಸ್ ಠಾಣೆಗೆ ಪುನೀತ್ ಕೆರೆಹಳ್ಳಿ ಆಗಮಿಸಿದ್ದರು.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ನಂಬರ್‌ನ ಸ್ಕ್ರೀನ್ ಶಾಟ್ ಬಳಸಿ ಕೋಮುಗಲಭೆ ಸೃಷ್ಟಿಸೋಕೆ ಪುನೀತ್ ಕೆರೆಹಳ್ಳಿಯನ್ನ ಬಿಜೆಪಿ ಬಳಸ್ತಿದೆ ಅಂತಾ ಪೋಸ್ಟ್ ಮಾಡಿದ್ದಾರೆ. ಆದರೆ ಆ ಸ್ಕ್ರೀನ್ ಶಾಟ್ ನಕಲಿಯಾಗಿದೆ. ಅದು ಎಲ್ಲಿದೆ ಅದನ್ನ ತೋರಿಸಿ. ಬೇಕಿದ್ದರೆ ನನ್ನ ಮೊಬೈಲ್ ಪರಿಶೀಲನೆ ಮಾಡಿ ಅಂತ ಪುನೀತ್ ಕೆರೆಹಳ್ಳಿ ಸವಾಲು ಹಾಕಿದ್ದಾರೆ.
ಯಾರ ಮೊಬೈಲ್ ನಲ್ಲಿ ಆ ಸ್ಕ್ರೀನ್ ಶಾಟ್ ತೆಗೆದ್ರಿ, ಯಾಕೆ ಸುಳ್ಳು ಸುದ್ದಿಯನ್ನ ಹಬ್ಬಿಸ್ತಿದೀರಿ ಅಂತ ಪುನೀತ್ ಕೆರೆಹಳ್ಳಿ ಪ್ರಶ್ನಿಸಿದ್ದಾರೆ. ಬಿಕೆ ಹರಿಪ್ರಸಾದ್ ಗೋದ್ರಾ ಬಗ್ಗೆ ಹೇಳಿಕೆ ಕೊಟ್ಟ ಮೇಲೆ ಈ
ರೀತಿ ಪೋಸ್ಟ್ ಮಾಡಿದ್ದಾರೆ. ರಾಮ ಮಂದಿರಕ್ಕೆ ಹೋಗೋರು ಭಯ ಪಡ್ಬೇಕು ಅಂತಾ ಈ ತರ ಮಾಡ್ತಿದ್ದಾರೆ ಅಂತ ಪುನೀತ್ ಆರೋಪಿಸಿದ್ದಾರೆ.
ದೂರು ಪಡೆಯಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ. ಸೈಬರ್ ಕ್ರೈಮ್ ಗೆ ಹೋಗಿ ಕೊಡಿ ಅಂತಿದ್ದಾರೆ. ಪ್ರತಿಯೊಂದಕ್ಕೂ ಕೋರ್ಟ್‌ಗೆ ಹೋಗೋಕೆ ಆಗಲ್ಲ. ಎನ್‌ಸಿಆರ್ ಆದ್ರೂ ಮಾಡಿ ಕೊಡಿ ಅಂತಾ ಕೇಳ್ತೀನಿ. ರಾಜ್ಯದ ಬೇರೆ ಬೇರೆ ಕಡೆಯಿಂದ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರು ನೀಡಲು ಮುಂದಾಗಿದ್ದಾಗಿ ಪುನೀತ್ ಕೆರೆಹಳ್ಳಿ ಹೇಳಿದ್ದಾರೆ.
ಶ್ರೀಕಾಂತ್ ಪೂಜಾರಿ ಹಳೇ ಕೇಸ್ ಓಪನ್ ಆಗುತ್ತೆ. ದತ್ತಪೀಠ ಕೇಸ್ ರೀ ಓಪನ್ ಆಗುತ್ತೆ. ಈಗ ನನ್ನ ಮೇಲೆ ಆರೋಪ ಬರುತ್ತೆ. ಇದೆಲ್ಲವನ್ನೂ ಹಿಂದೂ ಕಾರ್ಯಕರ್ತರನ್ನ ಭಯ ಪಡಿಸುತ್ತಿದೆ. ದೂರು ಕೊಟ್ಟಿದ್ದೇವೆ. ಆದರೆ ಎಫ್ಐಆರ್ ಹಾಕುವುದಕ್ಕೆ ಮೀನಾಮೇಷವೆಣಿಸುತ್ತಿದ್ದಾರೆ. ಪ್ರತಿಯೊಂದಕ್ಕೂ ಕೋರ್ಟ್‌ಗೆ ಹೋಗುವುದಕ್ಕೆ ಆಗಲ್ಲ. ಎಫ್ಐಆರ್ ಹಾಕುವವರೆಗೂ ನಾನು ಬಿಡಲ್ಲ. ನನ್ನನ್ನ ಭಯೋತ್ಪಾದಕ ಅಂತೀರಾ ನಾಚಿಕೆ ಆಗಲ್ವಾ? ಡಿಜೆ ಹಳ್ಳಿಯಲ್ಲಿ ನಿಮ್ಮ ಅಣ್ಣ ತಮ್ಮಂದಿರು ಮಾಡಿರುವ ಕೆಲಸ. ನನ್ನನ್ನ ಯಾಕೆ ನೀವು ಮತಾಂಧ ಅಂತೀರಾ ಎಂದು ಪ್ರಶ್ನಿಸಿದರು. ಧರಣಿ ನಂತರ ಬಸವನಗುಡಿ ಪೊಲೀಸರು ಎನ್‌ಸಿಆರ್ ದಾಖಲಿಸಿದರು.














