ಬಂಟ್ವಾಳ :ಶ್ರೀ ಸಾಯಿ ಕಿಡ್ಸ್ ಝೋನ್ ವಿದ್ಯಾಸಂಸ್ಥೆ ಗಳ ಪೋಷಕರ ಕ್ರೀಡಾಕೂಟವು ಜ.07 ರಂದು ಆದಿತ್ಯವಾರ ಬಂಟ್ವಾಳ ಎಸ್ ವಿ ಎಸ್ ದೇವಳ ಆಂಗ್ಲ ಮಾದ್ಯಮ ಶಾಲಾ ಕ್ರೀಡಾಂಗಣದಲ್ಲಿ ನಡೆಯಿತು.
ಕ್ರೀಡಾಕೂಟದ ಉದ್ಘಾಟನೆಯನ್ನು ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಭಿಲಾಷ್ ಭಟ್ ದೀಪ ಬೆಳಗಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ಉಪಾಧ್ಯಕ್ಷೆ ಶಿಲ್ಪ ತೇಜಸ್, ಕೋಶಾದ್ಯಕ್ಷ ಜ್ಞಾನೇಶ ರಾವ್,ಆಡಳಿತ ಮಂಡಳಿಯ ಸದಸ್ಯೆ ಆರತಿ ಅಮೀನ್ ಮತ್ತು ಕಾರ್ಯಕಾರಿ ಮಂಡಳಿಯ
ಸದಸ್ಯರು ಉಪಸ್ಥಿತರಿದ್ದರು.
ನಂತರ ಪೋಷಕರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಿತು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಶಾಲಾ ಸಂಚಾಲಕ ಐತಪ್ಪ ಪೂಜಾರಿ ಸ್ವಾಗತಿಸಿದರು.ದೈಹಿಕ ಶಿಕ್ಷಣ ಶಿಕ್ಷಕ ಚಿನ್ನಪ್ಪ, ಶಿಕ್ಷಕಿಯರಾದ ಆಶಾಲತಾ , ಜಯಶ್ರೀ , ಮತ್ತು ಸಂಸ್ಥೆಯ ಶಿಕ್ಷಕಿಯರು,ಸಿಬ್ಬಂದಿ ವರ್ಗದವರು ಸಹಕರಿಸಿದರು.














