1.2 ಕೋಟಿ ಮೌಲ್ಯದ ಚಿನ್ನದ ಪಾದುಕೆ ಹೊತ್ತು , 1,300 ಕಿ.ಮೀ.ಪಾದಯಾತ್ರೆ ಹೈದರಾಬಾದ್ ಮೂಲದ ರಾಮಭಕ್ತ ಚಾರ್ಲಾ ಶ್ರೀನಿವಾಸ ಶಾಸ್ತ್ರಿ ಅಯೋದ್ಯೆಗೆ ಪಯಣ

Coastal Bulletin
1.2 ಕೋಟಿ ಮೌಲ್ಯದ ಚಿನ್ನದ ಪಾದುಕೆ ಹೊತ್ತು , 1,300 ಕಿ.ಮೀ.ಪಾದಯಾತ್ರೆ ಹೈದರಾಬಾದ್ ಮೂಲದ ರಾಮಭಕ್ತ ಚಾರ್ಲಾ ಶ್ರೀನಿವಾಸ ಶಾಸ್ತ್ರಿ ಅಯೋದ್ಯೆಗೆ ಪಯಣ

ರಾಮ ಮಂದಿರದಲ್ಲಿ ರಾಮ ಲಲ್ಲಾನ ವಿಗ್ರಹ ಪ್ರತಿಷ್ಠಾಪನೆಗೆ ಕೆಲವೇ ದಿನಗಳು ಬಾಕಿ ಇರುವಾಗ ದೇಶ-ವಿದೇಶಗಳಿಂದ ಉಡುಗೊರೆಗಳ ಮಹಾಪೂರವೇ ಹರಿದು ಬರುತ್ತಿರುವ ಈ ನಡುವೆ ಹೈದರಾಬಾದ್ ಮೂಲದ ಭಕ್ತರಾದ ಚಾರ್ಲಾ ಶ್ರೀನಿವಾಸ ಶಾಸ್ತ್ರಿ ಎಂಬವರು 1.2 ಕೋಟಿ ಮೌಲ್ಯದ ಪಾದುಕೆಯನ್ನು ಅಯೋಧ್ಯೆಗೆ ತಲುಪಿಸಲು 1,300 ಕಿ.ಮೀ. ದೂರದಿಂದ ಅಯೋಧ್ಯೆಗೆ ಪಾದಯಾತ್ರೆ ಮಾಡುತ್ತಿದ್ದಾರೆ. ಖುದ್ದು ಸಿಎಂ ಯೋಗಿ ಆದಿತ್ಯನಾಥ ಅವರಿಗೆ ಪಾದುಕೆಗಳನ್ನು ತಲುಪಿಸಲು ಶಾಸ್ತ್ರಿ ನಿರ್ಧರಿಸಿದ್ದು, ಪ್ರತೀ ದಿನ 38 ಕಿ.ಮೀ.ಗಳ ವರೆಗೆ ಪಾದುಕೆಯನ್ನು ತಲೆಯ ಮೇಲೆಯೇ ಹೊತ್ತು ಸಾಗುತ್ತಿದ್ದಾರೆ. 2023ರ ಅ. 28ರಂದು ಅವರು ತಮ್ಮ ಪ್ರಯಾಣ ಆರಂಭಿಸಿದ್ದು, ಜ.13ರ ವೇಳೆಗೆ ಅಯೋಧ್ಯೆ ತಲುಪುವ ನಿರೀಕ್ಷೆ ಇದೆ.

ಮೊದಲಿಗೆ ಬೆಳ್ಳಿಯಿಂದ ಪಾದುಕೆ ತಯಾರಿಸ ಲಾಗಿತ್ತು ಮಾರ್ಗಮಧ್ಯೆ ಅವುಗಳಿಗೆ ಚಿನ್ನದ ಲೇಪ ಮಾಡುವ ಬಯಕೆಯಿಂದ ಮತ್ತೆ ಹೈದರಾಬಾದ್‌ಗೆ ಹಿಂದಿರುಗಿಸಿ

ಅವುಗಳ ಚಿನ್ನ ಲೇಪನಗೊಂಡು ಬಂದ ಬಳಿಕ ಮತ್ತೆ ಪ್ರಯಾಣ ಆರಂಭಿಸಿದ್ದಾರೆ. ಒಂದೊಂದು ಪಾದುಕೆ 12.5 ಕೆ.ಜಿ. ತೂಕವಿದೆ ಎನ್ನಲಾಗುತ್ತಿದೆ.

Leave a Comment