Coastal Bulletin

ಬೆಂಗಳೂರು : ಮಗ ಯತಿರಾಜ್ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಜಗ್ಗೇಶ್ ಮಾಹಿತಿ ನೀಡಿದ್ದು,, ಕೊರೋನಾ ಬಂದಾಗಿನಿಂದ ಹೊರ ಹೋಗಿಲ್ಲ ಹೋಗಿ ಬರುತ್ತೇನೆ ಎಂದು ಅಮ್ಮನಿಗೆ ಹೇಳಿ ಯತಿರಾಜ್ ಹೊರ ಹೋಗಿದ್ದ, ಈ ವೇಳೆ ಕಾರು ಅಪಘಾತಕ್ಕೀಡಾಗಿದೆ. ಒಂದು ಸಣ್ಣ ಗಾಯವೂ ಆಗದಂತೆ ಮಗನನ್ನು ಪವಾಡದ ರೀತಿ ರಾಯರು ಕಾಪಾಡಿದ್ದಾರೆ ಎಂದು ತಿಳಿಸಿದ್ದಾರೆ.

ಅವನು ಪ್ರತಿಬಾರಿ ಅವನ ಇಷ್ಟದ ರಸ್ತೆ ಬೆಂಗಳೂರು ಟು ಚಿಕ್ಕಬಳ್ಳಾಪುರ ಮಾರ್ಗವಾಗಿ ಹೋಗಿ ಬರುತ್ತಾನೆ. ಇಂದು ಕೂಡ ಹೋಗಿ ಬರುವಾಗ ರಸ್ತೆಗೆ ಅಡ್ಡ ಬಂದ ನಾಯಿ ರಕ್ಷಿಸಲು

ಹೋಗಿ ರಸ್ತೆ ವಿಭಜಕಕ್ಕೆ ಹೊಡೆದು ಕಾರು ಪಕ್ಕದ ರಸ್ತೆಗೆ ಬಿದ್ದಿದೆ. ರಾಯರ ದಯೆ ಹಾಗೂ ನಿಮ್ಮ ಶುಭಹಾರೈಕೆ ಯತಿರಾಜನಿಗೆ ಸಣ್ಣ ಗಾಯವು ಆಗಿಲ್ಲ ಎಂದು ಹೇಳಿದ್ದಾರೆ.

Leave a Comment