ದೆಹಲಿ : ವೈದ್ಯರನ್ನು ನಾವು ದೇವರೆಂದು ಪರಿಗಣಿಸಿದ್ದೇವೆ. ವೈದ್ಯರು ನಮಗೆ ಪುನರ್ಜನ್ಮ ನೀಡುವ ದೇವರು. ಕೊರೋನಾ ಬಿಕ್ಕಟ್ಟಿನಿಂದ ದೇಶವನ್ನು ಪಾರು ಮಾಡುವಲ್ಲಿ ವೈದ್ಯರ ಕೊಡುಗೆ ದೊಡ್ಡದು. ವೈದ್ಯರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಜನರ ಜೀವ ಉಳಿಸಿದ್ದಾರೆ ಎಂದು ಪ್ರಧಾನಿ ನುಡಿದರು.
ವೈದ್ಯರ ದಿನಾಚರಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಗುರುವಾರ ವೈದ್ಯರನ್ನು ಉದ್ದೇಶಿಸಿ ಮಾತನಾಡಿದರು.
ಸೋಂಕಿತರ ಚಿಕಿತ್ಸೆಗಾಗಿ ಶ್ರಮಿಸಿದ, ಸೋಂಕಿನಿಂದ ಮೃತಪಟ್ಟ ವೈದ್ಯರಿಗೆ ಇದೇ ಸಂದರ್ಭ ಮೋದಿ ಶ್ರದ್ಧಾಂಜಲಿ ಸಲ್ಲಿಸಿದರು. ಕೊರೋನಾ ಬಿಕ್ಕಟ್ಟಿನ ಸಂದರ್ಭದಲ್ಲಿ ವಿಜ್ಞಾನಿಗಳ ಜತೆಗೂಡಿ ವೈದ್ಯರೂ ಹೋರಾಡಿದ್ದಾರೆ ಎಂದು ಮೋದಿ ನೆನಪಿಸಿಕೊಂಡರು.
ಆರೋಗ್ಯ ಕ್ಷೇತ್ರದ ಸುಧಾರಣೆಗೆ 50
ಸಾವಿರ ಕೋಟಿ ಅನುದಾನ ಮೀಸಲಿಡಲಾಗಿದೆ. ಈ ಬಾರಿ ಬಜೆಟ್ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ದುಪ್ಪಟ್ಟು ಅನುದಾನ ನೀಡಿದ್ದೇವೆ. ದೇಶದಲ್ಲಿ 7 ವರ್ಷದಲ್ಲಿ 15 ಹೊಸ ಏಮ್ಸ್ ಸ್ಥಾಪಿಸಲಾಗಿದೆ. ವೈದ್ಯರ ಮೇಲೆ ದೌರ್ಜನ್ಯ ತಡೆಗೆ ಹೊಸ ಕಾನೂನು ಜಾರಿ ಮಾಡಿದ್ದೇವೆ. ವಾರಿಯರ್ಸ್ಗೆ ವಿಮೆಯ ಸುರಕ್ಷೆ ಒದಗಿಸಿದ್ದೇವೆ ಎಂದು ಹೇಳಿದರು.















