ದಾಮೋದರ್ ದೊಂಡೋಲೆ

ಅಸಾಧ್ಯ..ಭಾರತೀಯರು ಕುಸ್ತಿ, ಶೂಟಿಂಗ್, ಬ್ಯಾಡ್ಮಿಂಟನ್ ನಲ್ಲಿ ಪದಕ ಗೆಲ್ಬೋದು, ಆದರೆ ಟ್ರ್ಯಾಕ್ ಆಂಡ್ ಫೀಲ್ಡ್ ನಲ್ಲಿ ಅಸಾಧ್ಯ ಅಂದವರೆದುರು ಗೋಲ್ಡನ್ ಬಾಯ್ ಆಗಿ ಮೆರೆದಾಡಿದಾತ ಹರಿಯಾಣದ ಹೀರೋ ನೀರಜ್ ಛೋಪ್ರಾ. ಚಾಕೋಲೆಟ್ ಹೀರೋ ಸಾಗಿ ಬಂದ ಹಾದಿ ಕಲ್ಲು ಮುಳ್ಳಿನದ್ದೇ ಆದರೂ, ಗುರಿ ಮಾತ್ರ ಚಿನ್ನದ ಮೇಲಿತ್ತು.

ಮೊಣಕೈ ಗಾಯದಿಂದಾಗಿ ಕುಗ್ಗಿಹೋಗಿದ್ದ ಛೋಪ್ರಾ 2018ರ ಕೊನೆಯಲ್ಲಿ ದಕ್ಷಿಣ ಆಫ್ರಿಕಾದಲ್ಲೇ ನೀರಜ್ ಛೋಪ್ರಾ ಒಲಿಂಪಿಕ್ಸ್ ನಲ್ಲಿ ಪಾಲ್ಗೊಳ್ಳಲು ಅರ್ಹತೆ ಗಿಟ್ಟಿಸಿಕೊಂಡಿದ್ದರು. ಆದರೆ ಆ ನಂತರ ಅವರಿಗೆ ಮೊಣಕೈ ಗಾಯವಾಗಿತ್ತು. ಇವರು ಆಸ್ಪತ್ರೆ ಸೇರಿದ್ರು.ಆದರೆ ಛಲ ಮಾತ್ರ ಬಿಡಲಿಲ್ಲ. ಗಾಯದಿಂದ ಚೇತರಿಸಿಕೊಳ್ಳುವಷ್ಟರಲ್ಲಿ ಕರೊನಾ ಕಾಟ ಶುರುವಾಯ್ತು. ಹೀಗೆ ಅಂತರಾಷ್ಟ್ರೀಯ

ಟೂರ್ನಿಗಳು ಇಲ್ಲದೆಯೂ ಛೋಪ್ರಾ ನಿರಂತರ ಅಭ್ಯಾಸ ನಡೆಸಿ ಬಂಗಾರದ ಮೇಲೆ ಗುರಿಯಿಟ್ಟರು. 

ಟರ್ಕಿಯಲ್ಲಿ ಅಭ್ಯಾಸ ನಡೆಸಲು ಹೋಗಬೇಕಾಗಿದ್ದವರಿಗೂ ಕೂಡ ಕರೊನಾ ಕಾಟ ಕೊಟ್ಟಿತ್ತು. ಆದರೂ ಪಟಿಯಾಳದಲ್ಲಿ ಪಟ್ಟು ಬಿಡದ ಪಾಣಿಪತ್ ನ ಪಂಟರ್, ಕೊನೆಯಲ್ಲಿ ಸ್ವೀಡನ್ ಗೆ ತೆರಳಿ ತರಬೇತಿ ಪಡೆದು ಇಂದು ವಿಶ್ವದ ಹೀರೋ ಆಗಿ ನಿಂತಿದ್ದಾರೆ. 

Leave a Comment