Coastal Bulletin

ಬೆಂಗಳೂರು : ರಸ್ತೆ ಅಪಘಾತಕ್ಕೀಡಾಗಿ ನಗರದ ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ (38 ವ.) ಅವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಶನಿವಾರ ರಾತ್ರಿ ತಮ್ಮ ಸ್ನೇಹಿತನ ಜೊತೆ ಬೈಕ್‌ನಲ್ಲಿ ತೆರಳುತ್ತಿದ್ದ ಸಂಚಾರಿ ವಿಜಯ್ ಅವರ ಬೈಕ್‌ ಅಪಘಾತಕ್ಕೀಡಾಗಿ, ತಲೆ ಮತ್ತು ಕಾಲಿಗೆ ಗಂಭೀರ ಗಾಯವಾಗಿತ್ತು. ಆಸ್ಪತ್ರೆಗೆ ದಾಖಲಾದಾಗಲೇ ಅವರ ಸ್ಥಿತಿ ಗಂಭೀರವಾಗಿತ್ತು. ಮೆದುಳಿನಲ್ಲಿ ರಕ್ತಸ್ರಾವವಾಗಿದ್ದರಿಂದ ಕೋಮ ಸ್ಥಿತಿಯಲ್ಲಿದ್ದರು. ಐಸಿಯುನಲ್ಲಿ ವೈದ್ಯರು ನಿರಂತರ ಚಿಕಿತ್ಸೆ ನೀಡಿದರೂ ಕೂಡ, ಚಿಕಿತ್ಸೆಗೆ ಸ್ಪಂದಿಸದ ಅವರು ಮೃತಪಟ್ಟಿದ್ದಾರೆ.

ಈ ಬಗ್ಗೆ ತಮ್ಮ ದುಃಖ ಹಂಚಿಕೊಂಡಿರುವ ನಟ

ವಿಜಯ್ ಸಹೋದರ ಸಿದ್ಧೇಶ್, ನನಗೆ ಅಣ್ಣನೇ ಸ್ಪೂರ್ತಿ, ಶಕ್ತಿ. ಅಂಗಾಂಗ ದಾನ ಮಾಡಲು ನಿರ್ಧಾರ ಮಾಡಿಲಾಗಿದೆ. ಅಣ್ಣನ ಅಂಗಾಂಗಗಳು ಸಮಾಜಕ್ಕೆ ಸಿಗಲಿ ಎಂದಿದ್ದಾರೆ.

ನಾನು ಅವನಲ್ಲ ಅವಳು ಚಿತ್ರದ ನಟನೆಗೆ ವಿಜಯ್ ರಾಷ್ಟ್ರಪ್ರಶಸ್ತಿ ಪಡೆದುಕೊಂಡಿದ್ದರು. ಒಗ್ಗರಣೆ, ದಾಸವಾಳ, ಸಿಪಾಯಿ, ಜಂಟಲ್‌ಮ್ಯಾನ್ ಸೇರಿದಂತೆ ಅನೇಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಮೇಲೊಬ್ಬ ಮಾಯಾವಿ, ತಲೆದಂಡ, ಆಟಕ್ಕುಂಟು ಲೆಕ್ಕಕ್ಕಿಲ್ಲ, ಅವಸ್ಥಾಂತರ ಸಿನಿಮಾಗಳು ತೆರೆಗೆ ಬರಲು ರೆಡಿಯಾಗಿತ್ತು.

Leave a Comment