Coastal Bulletin

ರಾಷ್ಟ್ರೀಯ ಹೆದ್ದಾರಿ 75ರ ಹಾಸನದ ಸಕಲೇಶಪುರ ತಾಲೂಕಿನ ದೋಣಿಗಾಲ್ ಬಳಿ ಧಾರಾಕಾರ ಮಳೆಗೆ ರಸ್ತೆಯಲ್ಲಿ ಭೂ ಕುಸಿತ ಉಂಟಾಗಿ ಶಿರಾಡಿ ಘಾಟ್ ರಸ್ತೆ ಸಂಚಾರ ಬಂದ್ ಮಾಡಲಾಗಿದೆ.

ದೋಣಿಗಾಲ್ ಬಳಿ ಹೆದ್ದಾರಿಯ ಅರ್ಧಭಾಗ ಕುಸಿದ ಹಿನ್ನೆಯಲ್ಲಿ ಹೆದ್ದಾರಿಯನ್ನು ತಹಸೀಲ್ದಾರ್ ಜಯಕುಮಾರ ಬಂದ್ ಮಾಡಿದ್ದಾರೆ. ಲಘು ವಾಹನಗಳಿಗೆ ಬಿಸ್ಲೆ ಘಾಟ್ ಮೂಲಕ

ಸಂಚರಿಸಲು ಅನುಮತಿ ಕೊಡಲಾಗಿದೆ. ಭಾರಿ ವಾಹನಗಳಿಗೆ ಮಡಿಕೇರಿ ಮೂಲಕ ಮಂಗಳೂರಿಗೆ ತೆರಳಬಹುದು. ಕಳೆದ ವರ್ಷವೂ ಮಳೆಗೆ ರಸ್ತೆಯ ಅರ್ಧಭಾಗ ಹಾನಿಗೊಳಗಾಗಿತ್ತು.

Leave a Comment