ಬಂಟ್ವಾಳ:ಲಯನ್ಸ್ ಪ್ರಾಂತೀಯ ಸಮ್ಮೇಳನದ ಲೆಕ್ಕಪತ್ರ ಮಂಡನೆ ಹಾಗೂಅಭಿನಂದನಾ ಕಾರ್ಯಕ್ರಮ ಬಿ.ಸಿ.ರೋಡು ಲಯನ್ಸ್ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಪ್ರಾಂತೀಯ ಅಧ್ಯಕ್ಷ ಸಂಜೀವ ಶೆಟ್ಟಿ ಬಿ.ಸಿ.ರೋಡು ದಂಪತಿಯನ್ನು ಸನ್ಮಾನಿಸಲಾಯಿತು.ಸನ್ಮಾನ ಸ್ವೀಕರಿಸಿ ಮಾತನಾಡಿದ ಸಂಜೀವ ಶೆಟ್ಟಿ ಕೋವಿಡ್ ಸಂಕಷ್ಟದ ನಡುವೆಯೂ ಬಂಟ್ವಾಳ ಸಾರ್ವಜನಿಕ ಆಸ್ಪತ್ರೆಗೆ ಸುಸಜ್ಜಿತ ಶೈತ್ಯಾಗಾರ ಕೊಡುಗೆ ನೀಡುವ ಮೂಲಕ ಲಯನ್ಸ್ ಪ್ರಾಂತೀಯ ಸಮ್ಮೇಳನ ಯಶಸ್ವಿಯಾಗಿದೆ ಎಂದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಡಾ.ವಸಂತ ಬಿ.ಬಾಳಿಗಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಗವರ್ನರ್ ವಸಂತ ಕುಮಾರ್ ಶೆಟ್ಟಿ, ಮಾಜಿ ಗವರ್ನರ್ ಡಾ.ಗೀತ್ ಪ್ರಕಾಶ ಶೆಟ್ಟಿ, ಮಾಜಿ ಗವರ್ನರ್ ದೇವದಾಸ ಭಂಡಾರಿ, ಮಾಜಿ
ವಲಯಾಧ್ಯಕ್ಷ ಶ್ರೀನಿವಾಸ ಪೂಜಾರಿ ಶುಭ ಹಾರೈಸಿದರು.
ಲಯನ್ಸ್ ಕ್ಲಬ್ ನ ಮಾಜಿ ಅಧ್ಯಕ್ಷ ಕೃಷ್ಣ ಶ್ಯಾಂ,ಮಾಜಿ ವಲಯಾಧ್ಯಕ್ಷ ಮನೋರಂಜನ್ ಕೆ.ಆರ್., ಸಲಹೆಗಾರ ರಾಧಾಕೃಷ್ಣ ರೈ,ಗಾಯತ್ರಿ ಗೀತ್ ಪ್ರಕಾಶ್, ಜಯಂತಿ ಸಂಜೀವ ಶೆಟ್ಟಿ ಉಪಸ್ಥಿತರಿದ್ದರು. ಪ್ರಾಂತೀಯ ಕಾರ್ಯದರ್ಶಿ ಮಧ್ವರಾಜ್ ಬಿ.ಕಲ್ಮಾಡಿ ವರದಿ ವಾಚಿಸಿ,ಕೋಶಾಧಿಕಾರಿ ಸುನಿಲ್ ಬಿ.ಅಪೂರ್ವ ಲೆಕ್ಕಪತ್ರ ಮಂಡಿಸಿದರು. ಡಾ.ದಿವ್ಯಾ ವಸಂತ ಶೆಟ್ಟಿ ಪ್ರಾರ್ಥಿಸಿದರು.
ಸಮ್ಮೇಳನ ಸಮಿತಿ ಅಧ್ಯಕ್ಷ ಸತೀಶ ಕುಡ್ವ ಸ್ವಾಗತಿಸಿ, ಸದಸ್ಯ ವಾಲ್ಟರ್ ನೊರೋಹ್ನ ವಂದಿಸಿದರು.ಮಾಜಿ ವಲಯಾಧ್ಯಕ್ಷ ದಾಮೋದರ ಬಿ.ಎಂ.ಕಾರ್ಯಕ್ರಮ ನಿರೂಪಿಸಿದರು.















