ಲಾಕ್ ಡೌನ್ ಸಂದರ್ಭದಲ್ಲಿ ಬಡವರು ಪಡಬಾರದ ಕಷ್ಟಗಳನ್ನ ಪಡುತ್ತಿದ್ದಾಗ ನೀಲಿ ಚಿತ್ರಗಳನ್ನ ತಯಾರಿಸಿ ಅದ್ರಿಂದ ದಿನಕ್ಕೆ ಎರಡರಿಂದ ಮೂರು ಲಕ್ಷ ಆದಾಯವನ್ನ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಗಳಿಸುತ್ತಿದ್ದೆರೆನ್ನುವ ಮಾಹಿತಿಯನ್ನ ಮುಂಬೈ ಪೊಲೀಸರು ನೀಡಿದ್ದಾರೆ.
ಇದುವರೆಗೆ ಸುಮಾರು 7.5ಕೋಟಿ ರೂ.ಗಳಿಗೂ ಅಧಿಕ ಹಣ ಜಮಾವಣೆ ಆಗಿರುವ ಕುರಿತು ವಿವಿಧ ಖಾತೆಗಳನ್ನು ಪರಿಶೀಲಿಸಿ ಮಾಹಿತಿ ಪಡೆದಿದ್ದೇವೆ ಎಂದು ಮಿಲಿಂದ್ ಭರಂಬೆ ತಿಳಿಸಿದ್ದಾರೆ.
ರಾಜ್ ಕುಂದ್ರಾ ತಮ್ಮ ಒಡೆತನದ ‘ಹಾಟ್ ಶಾಟ್’ ಸೇರಿದಂತೆ ಹಲವು ಆಪ್ಗಳಿಗೆ ನೀಲಿ ಚಿತ್ರಗಳನ್ನು ಅಪ್ಲೋಡ್ ಮಾಡುತ್ತಿದ್ದರು. ಆದರೆ ಅದನ್ನು ಲಂಡನ್ನಿಂದ ನಡೆಸಲಾಗುತ್ತಿತ್ತು. ಇದಕ್ಕೆ ಸಂಬಂಧಪಟ್ಟಂತೆ ತಿಳಿಸಿದ
ಮಿಲಿಂದ್, ರಾಜ್ ಕುಂದ್ರಾ ಅವರ ಕಚೇರಿಯಲ್ಲಿಯೇ ಚಿತ್ರೀಕರಣ ನಡೆಸಲಾಗುತ್ತಿತ್ತು. ನಂತರ ಅದನ್ನು ವಿ-ಟ್ರಾನ್ಸ್ಫರ್ ಮುಖಾಂತರ ಲಂಡನ್ಗೆ ಕಳುಹಿಸಿ ಕೆನ್ರಿನ್ ಲಿಮಿಟೆಡ್ ಕಂಪನಿ ಮುಖಾಂತರ ಆಪ್ಗಳಿಗೆ ಅಪ್ಲೋಡ್ ಮಾಡಲಾಗುತ್ತಿತ್ತು ಎಂದು ತಿಳಿಸಿದ್ದಾರೆ. ಸದ್ಯಕ್ಕೆ ರಾಜ್ ಕುಂದ್ರಾ ಅವ್ರನ್ನ ಜುಲೈ 23ರವರೆಗೆ ಖಾಕಿ ಕಸ್ಟಡಿಗೆ ವಹಿಸಲಾಗಿದೆ. ತನಿಖೆ ನಡೆಯುತ್ತಿದೆ. ಮತ್ತಷ್ಟು ವಿಚಾರಗಳೂ ಹೊರಬರುವ ಸಾಧ್ಯತೆ ಇದೆ.
















