Coastal Bulletin

ಕೋವಿಡ್ ಲಾಕ್ ಡೌನ್ ಸಡಿಲಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಚಾಟಿ ಬೀಸಿದ ಬೆನ್ನಲ್ಲೇ ಕೇರಳ ಸರ್ಕಾರ ಜುಲೈ 24 ಮತ್ತು25 ರಂದು ರಾಜ್ಯದಲ್ಲಿ ಸಂಪೂರ್ಣ ಲಾಕ್‌ಡೌನ್ ಆದೇಶಿಸಿದೆ.

ದಿನಕ್ಕೆ 3 ಲಕ್ಷ ಕೊರೋನಾ ಟೆಸ್ಟ್ ಗುರಿಯಾಗಿಟ್ಟುಕೊಂಡು ಸಾಮೂಹಿಕ ಪರೀಕ್ಷಾ ಅಭಿಯಾನವನ್ನು ನಡೆಸುವಂತೆ  ಮುಖ್ಯಮಂತ್ರಿ ಪಿಣರಾಯ್ ವಿಜಯನ್ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ನಿರ್ದೇಶನ ನೀಡಿದ್ದಾರೆ.

2021 ರ ಜುಲೈ 24 ಮತ್ತು 25 ರಂದು ಸಂಪೂರ್ಣ ಲಾಕ್‌ಡೌನ್ ಆಗಲಿದ್ದು, 2021 ರ ಜೂನ್ 12 ಮತ್ತು 13 ರಂದು ಹೊರಡಿಸಿದ ಮಾರ್ಗಸೂಚಿ ಅನುಸರಿಸುವಂತೆ ಜಿಲಾಡಳಿತಗಳಿಗೆ ರಾಜ್ಯ ಸರ್ಕಾರ ಸೂಚನೆ ನೀಡಿದೆ.

ಸ್ಥಳೀಯ ಸ್ವ-ಸರ್ಕಾರಿ ಸಂಸ್ಥೆ ಎಲ್ಲಾ ಜಿಲ್ಲೆಗಳಲ್ಲಿನ ಸೂಕ್ಷ್ಮ ವಲಯಗಳನ್ನು ಗುರುತಿಸಿ ಪಾಸಿಟಿವ್ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ನಿರ್ಬಂಧಗಳನ್ನು ಜಾರಿಗೊಳಿಸಲು ನಿರ್ದೇಶಿಸಲಾಗಿದೆ.

ಜೂನ್ 16 ರಂದು ರಾಜ್ಯ ಸರ್ಕಾರವು ತನ್ನ ರಾಜ್ಯವ್ಯಾಪಿ ಲಾಕ್‌ಡೌನ್

ಅನ್ನು ಹಿಂತೆಗೆದುಕೊಂಡ ನಂತರ ಮತ್ತು ಬಕ್ರೀದ್‌ಗೆ COVID-19 ನಿರ್ಬಂಧದಲ್ಲಿ ಮೂರು ದಿನಗಳ ವಿನಾಯಿತಿ ನೀಡಿತ್ತು. ಈ ಹಿನ್ನೆಲೆ ಜವಳಿ ಅಂಗಡಿಗಳು, ಆಭರಣಗಳು, ಪಾದರಕ್ಷೆಗಳ ಅಂಗಡಿಗಳು ಭಾನುವಾರದಿಂದ ಮೂರು ದಿನಗಳವರೆಗೆ ತೆರೆಯಲು ಅವಕಾಶ ಮಾಡಿಕೊಡಲಾಗಿತ್ತು. ಲಾಕ್‌ಡೌನ್ ವಿನಾಯಿತಿ ವಿರುದ್ಧ ನೀಡಿದ್ದ ಅರ್ಜಿಯ ಬಗ್ಗೆ ಸ್ಪಷ್ಟನೆ ನೀಡುವಂತೆ ಸುಪ್ರೀಂಕೋರ್ಟ್ ರಾಜ್ಯ ಸರ್ಕಾರವನ್ನು ಕೇಳಿದೆ.

ಉನ್ನತ ನ್ಯಾಯಾಲಯವು ರಾಜ್ಯ ಸರ್ಕಾರಕ್ಕೆ  ಜನರ ಬದುಕುವ ಹಕ್ಕನ್ನು ಗಮನದಲ್ಲಿರಿಸಿಕೊಳ್ಳಿ ಎಂದು ನಿರ್ದೇಶಿಸಿದೆ. ನಿರ್ಬಂಧಗಳನ್ನು ಸಡಿಲಗೊಳಿಸಿ ಕೊರೋನವೈರಸ್ ಮತ್ತಷ್ಟು ಹೆಚ್ಚಾದರೆ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದೆ. ವಿವಾದಾತ್ಮಕ ನಿರ್ಧಾರವನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಪತ್ರ ಬರೆದಿದೆ.

Leave a Comment