Coastal Bulletin

ಹೈದರಾಬಾದ್ : ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷದ ಹೆಸರು ಬದಲಾಗಿದೆ.

ಟಿಆರ್ ಎಸ್ ಪಕ್ಷಕ್ಕೆ ಭಾರತ ರಾಷ್ಟ್ರಸಮಿತಿ ಎಂದು ಮರುನಾಮಕರಣ ಮಾಡುವ ಕೆಸಿಆರ್ ಮನವಿಗೆ ಚುನಾವಣಾ ಆಯೋಗ‌ ಸಮ್ಮತಿ ಸೂಚಿಸಿದೆ.

ಟಿಆರ್ ಎಸ್ ಹೆಸರನ್ನು ಬಿಆರ್ ಎಸ್ ಎಂದು ಬದಲಾಯಿಸಲು ಭಾರತೀಯ ಚುನಾವಣಾ ಆಯೋಗ‌

ಗುರುವಾರ ಅನುಮೋದನೆ ನೀಡಿದೆ.

ಪಕ್ಷದ ಹೆಸರು ಬದಲಾವಣೆ ಕುರಿತು ಆಯೋಗವು ಶೀಘ್ರ ದಲ್ಲೇ ಅಗತ್ಯ ಅಧಿಸೂಚನೆ ಹೊರಡಿಸುವುದಾಗಿ ಪಕ್ಷದ ಅಧ್ಯಕ್ಷ ಹಾಗೂ ಮುಖ್ಯ ಮಂತ್ರಿ ಕೆ.ಚಂದ್ರಶೇಖರ್ ರಾವ್ ಪತ್ರದ ಮೂಲಕ ಮಾಹಿತಿ ನೀಡಿದೆ.

Leave a Comment