ದೇಶದಲ್ಲಿ ಓಮೈಕ್ರಾನ್ ಸೋಂಕು ತೀವ್ರವಾಗಿ ಹೆಚ್ಚಾಗುತ್ತಿದ್ದು, ಕಟ್ಟುನಿಟ್ಟಿನ ನಿಯಮ ಜಾರಿಗೆ ತಂದು ಓಮೈಕ್ರಾನ್ ಸೋಂಕು ಹರಡುವಿಕೆ ತಡೆಯಬೇಕೆಂದು ಕೇಂದ್ರ ಆರೋಗ್ಯ ಇಲಾಖೆ ಮಾರ್ಗಸೂಚಿ ಪ್ರಕಟಿಸಿದೆ. ಈ ಮಾರ್ಗಸೂಚಿಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.
ಓಮೈಕ್ರಾನ್ ವಿರುದ್ಧ ಕೊರೋನಾ ಲಸಿಕೆಗಳು ಪರಿಣಾಮಕಾರಿಯಾಗಿ ಕೆಲಸ ಮಾಡುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದ್ದು ಅದಕ್ಕಾಗಿ ಬೂಸ್ಟರ್ ಡೋಸ್ ಬಳಕೆ ಮಾಡಬೇಕೆಂಬ ಮಾತುಗಳು ಕೇಳಿಬರುತ್ತಿವೆ.
ಆದುದರಿಂದ ಬೂಸ್ಟರ್ ಡೋಸ್ ಬಳಕೆ ಮಾಡುವ ಬಗ್ಗೆ ತಜ್ಞರ ಅಭಿಪ್ರಾಯ ಕೇಳಲಿದ್ದಾರೆ ಮೋದಿ ಎಂದು ಗೊತ್ತಾಗಿದೆ.
ಮುಂದಿನ ಫೆಬ್ರವರಿ-ಮಾರ್ಚಿಯಲ್ಲಿ ಮೂರನೇ ಅಲೆ ಕೊರೋನಾ ಬರಬಹುದೆಂದು
ಕೆಲವು ಆರೋಗ್ಯ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಇದಲ್ಲದೆ ಮೂರನೇ ಅಲೆಯ ವೇಳೆ ಹೊಸ ರೂಪಾಂತರಿ ತಳಿಗಳು ಬರಬಹುದೆಂದು. ಅವು ಮೊದಲಿಗಿಂತಲೂ ಅಪಾಯಕಾರಿಯಾಗಿರಬಹುದು ಎಂದು ಆತಂಕಕಾರೊ ಭವಿಷ್ಯ ನುಡಿದಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯೂ ಇಂತಹುದೇ ಮುನ್ನೆಚ್ಚರಿಕೆ ನೀಡಿದೆ. ಆದುದರಿಂದ ಮೂರನೇ ಅಲೆಯ ನಿಯಂತ್ರಣಕ್ಕೆ ಇಂದಿನಿಂದ ಕೊರೋನಾ 50-50 ಶುರು.














