Coastal Bulletin

ದೆಹಲಿ : ಬಕ್ರೀದ್ ಆಚರಿಸುವ ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಶುಭಾಶಯ ತಿಳಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಮೋದಿ ‘ಈದ್-ಉಲ್-ಅಧಾ ಶುಭಾಶಯಗಳು. ಈ ದಿನವು ಸಾಮೂಹಿಕ ಸಹಾನುಭೂತಿ, ಸಾಮರಸ್ಯ ಮತ್ತು ಮತ್ತು ಅಂತರ್ಗತತೆಯ ಮನೋಭಾವ ಹೆಚ್ಚಿಸಲಿ’ ಎಂದು ಹೇಳಿದ್ದಾರೆ.

‘ಎಲ್ಲಾ ಸಹ ನಾಗರಿಕರಿಗೆ ಈದ್ ಮುಬಾರಕ್. ಈದ್-ಉಜ್-ಜುಹಾ ಪ್ರೀತಿ

ಮತ್ತು ತ್ಯಾಗದ ಮನೋಭಾವವನ್ನು ವ್ಯಕ್ತಪಡಿಸಲು ಹಾಗೂ ಅಂತರ್ಗತ ಸಮಾಜದಲ್ಲಿ ಏಕತೆ ಮತ್ತು ಭ್ರಾತೃತ್ವಕ್ಕಾಗಿ ಒಟ್ಟಾಗಿ ಕೆಲಸ ಮಾಡುವ ಹಬ್ಬವಾಗಿದೆ. ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಲು ಮತ್ತು ಎಲ್ಲರ ಸಂತೋಷಕ್ಕಾಗಿ ಕೆಲಸ ಮಾಡುವುದಾಗಿ ನಾವು ಸಂಕಲ್ಪ ಮಾಡೋಣ’ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದ್ದಾರೆ.

Leave a Comment