Coastal Bulletin

ತಿರುಮಲ:ಹೈದ್ರಾಬಾದ್‍ನ ಭಕ್ತರೊಬ್ಬರು ತಿರುಮಲ ವೇಂಕಟೇಶ್ವರ ದೇವಳಕ್ಕೆ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಚಿನ್ನದ ನಾಗ ನಂದಕ ಮತ್ತು ಸ್ವರ್ಣ ಖಡ್ಗ ನೀಡಿದ್ದಾರೆ.

ಹೈದರಾಬಾದ್‍ನ ನಿವಾಸಿ ಎಂ.ಶ್ರೀನಿವಾಸ್ ಪ್ರಸಾದ್ ಮತ್ತು ಅವರ ಕುಟುಂಬ ವೆಂಕಟೇಶ್ವರ ಸ್ವಾಮಿಗೆ 1.8 ಕೋಟಿ ರೂಪಾಯಿ ಮೌಲ್ಯದ ಚಿನ್ನದ ನಾಗ ನಂದಕ ಮತ್ತು 4 ಕೋಟಿ ರೂಪಾಯಿ ಮೌಲ್ಯದ 6.5 ಕೆಜಿ ತೂಕವುಳ್ಳ

ಚಿನ್ನದ ಖಡ್ಗವನ್ನು ದೇವರಿಗೆ ಅರ್ಪಿಸಿ ತಿರುಮಲ ತಿರುಪತಿ ದೇವಸ್ಥಾನ ಅಧಿಕಾರಿಗಳಿಗೆ ಹಸ್ತಾಂತರ ಮಾಡಿದ್ದಾರೆ. ದೇವರಿಗೆ ಖಡ್ಗವನ್ನು ನೀಡುವ ಮೊದಲು ತಿರುಮಲ ಕಲೆಕ್ವಿವ್ ಗೆಸ್ಟ್ ಹೌಸ್ ನಲ್ಲಿ  ಮಾಧ್ಯಮಗಳ ಮುಂದೆ ಚಿನ್ನದ ಖಡ್ಗವನ್ನು ಪ್ರದರ್ಶಿಸಿದ್ದಾರೆ.

Leave a Comment