ಸುಶಾಂತ್ ಸಿಂಗ್ ಮ್ಯಾನೇಜರ್ ದಿಶಾ ಸಾಲಿಯನ್‌ ಕೇಸ್​ಗೆ ಟ್ವಿಸ್ಟ್; ಆದಿತ್ಯ ಠಾಕ್ರೆಗೆ ಸಂಕಷ್ಟ

Coastal Bulletin
ಸುಶಾಂತ್ ಸಿಂಗ್ ಮ್ಯಾನೇಜರ್ ದಿಶಾ ಸಾಲಿಯನ್‌ ಕೇಸ್​ಗೆ ಟ್ವಿಸ್ಟ್; ಆದಿತ್ಯ ಠಾಕ್ರೆಗೆ ಸಂಕಷ್ಟ

ದಿಶಾ ಸಾಲಿಯನ್‌ (Disha Salian) ಸಾವು ಪ್ರಕರಣ ಹೊಸ ಸ್ವರೂಪ ಪಡೆದುಕೊಂಡಿದ್ದು, ಶಿವಸೇನೆ ಎಂಎಲ್​​ಎ ಆದಿತ್ಯ ಠಾಕ್ರೆ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ನಟರಾದ ಆದಿತ್ಯ ಪಂಚೋಲಿ (Aditya Pancholi ), ದಿನೊ ಮೋರಿಯಾ (Dino Morea ) ಜೊತೆ ಸೇರಿಕೊಂಡು ದಿಯಾ ಸಾಲಿಯಾನ್ ಮೇಲೆ ಸಾಮೂಹಿಕ ಅತ್ಯಾ*ರ ಮಾಡಿದ್ದಾರೆ, ನಂತರ ಸಾಯಿಸಿದ್ದಾರೆ. ನಮ್ಮ ಬಳಿ ಹೀನ ಕೃತ್ಯಕ್ಕೆ ಸಂಬಂಧಿಸಿ ಪ್ರತ್ಯಕ್ಷದರ್ಶಿ ಸಾಕ್ಷಿಗಳಿದ್ದಾರೆ ಎಂದು ವಕೀಲ ನಿಲೇಶ್ ಓಜಾ ಆರೋಪಿಸಿದ್ದಾರೆ. ವಕೀಲರ ಹೇಳಿಕೆ ಬೆನ್ನಲ್ಲೇ ಶಿವಸೇನೆ ಶಾಸಕ ಆದಿತ್ಯ ಠಾಕ್ರೆಗೆ (MLA Aaditya Thackeray) ಮತ್ತಷ್ಟು ಸಂಕಷ್ಟ ಎದುರಾಗಿದೆ.

ಏನಿದು ಪ್ರಕರಣ..?

2020ರ ಜೂನ್ 8 ರಂದು ದಿಶಾ ಸಾಲಿಯನ್ ಪ್ರಾಣ ಕಳೆದುಕೊಂಡಿದ್ದಾರೆ. ಮುಂಬೈನ ಅಪಾರ್ಟ್​​ಮೆಂಟ್​ನಿಂದ ಬಿದ್ದು ದಿಶಾ ಸಾಲಿಯನ್ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಈ ಹಿಂದೆ ಪ್ರಕರಣದ ತನಿಖೆ ನಡೆಸಿದ್ದ ಮುಂಬೈ ಪೊಲೀಸರು, ಅಪಾರ್ಟ್​​ಮೆಂಟ್​ನಿಂದ ಆಕಸ್ಮಿಕವಾಗಿ ಬಿದ್ದು ದಿಶಾ ಸಾವನ್ನಪ್ಪಿದ್ದಾರೆ ಎಂದು ಪ್ರಕರಣ ಕ್ಲೋಸ್ ಮಾಡಿದ್ದರು. ದಿಶಾ, ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್‌ಗೆ ಮ್ಯಾನೇಜರ್ ಆಗಿದ್ದರು. ದಿಶಾ ಸಾವನ್ನಪ್ಪಿದ 6 ದಿನಗಳ ಬಳಿಕ ನಟ ಸುಶಾಂತ್ ಸಿಂಗ್ ರಜಪೂತ್ ಕೂಡ ಮೃತಪಟ್ಟಿದ್ದ.

ಪ್ರಕರಣಕ್ಕೆ ಮರುಜೀವ

ಇದೀಗ ಪ್ರಕರಣಕ್ಕೆ ಮರುಜೀವ ಬಂದಿದೆ. ಹಿಂದೆ ತನಿಖೆ ನಡೆಸಿದ್ದ ಎಸ್​ಐಟಿ ಸರಿಯಾಗಿ ಮಾಡಿಲ್ಲ. ಹಾಗಾಗಿ ಪ್ರಕರಣವನ್ನು ಸಿಬಿಐಗೆ ನೀಡಬೇಕು ಎಂದು ಕೋರಿ ಬಾಂಬೆ ಹೈಕೋರ್ಟ್‌ಗೆ ದಿಶಾ ತಂದೆ ಸತೀಶ್ ಸಾಲಿಯನ್ ಅರ್ಜಿ ಸಲ್ಲಿಸಿದ್ದಾರೆ.

ಆರೋಪ ಏನು..?

2020ರ ಜೂನ್ 8 ರಂದು ಅಂದರೆ ಸಾವನ್ನಪ್ಪುವ ದಿನ ದಿಶಾ ತನ್ನ ಮನೆಯಲ್ಲಿ ಪಾರ್ಟಿ ಆಯೋಜನೆ

ಮಾಡಿದ್ದಳು. ಈ ಪಾರ್ಟಿಗೆ ಆದಿತ್ಯ ಠಾಕ್ರೆ , ದಿನೂ ಮೋರಿಯಾ, ಸೂರಜ್ ಪಂಚೋಲಿ ಬಂದಿದ್ದರು. ಪಾರ್ಟಿಯಲ್ಲಿ ದಿಶಾ ಮೇಲೆ ರೇ*ಪ್ ನಡೆದಿದೆ, ನಂತರ, ಮರ್ಡರ್ ಮಾಡಲಾಗಿದೆ. ದಿಶಾ ಮೇಲೆ ರೇ*ಪ್ ನಡೆಸಿ, ಮರ್ಡರ್ ಮಾಡಲಾಗಿದೆ. ಅಂದು ತನಿಖೆ ನಡೆಸಿರುವ ಎಸ್​ಐಟಿ ಫೋರೆನ್ಸಿಕ್ ಸಾಕ್ಷ್ಯ, ಪ್ರತ್ಯಕ್ಷದರ್ಶಿಗಳ ಸಾಕ್ಷ್ಯ ಪರಿಗಣಿಸಿಲ್ಲ ಎಂದು ಹೈಕೋರ್ಟ್​ಗೆ ಈಗ ದೂರು ಸಲ್ಲಿಸಿದ್ದಾರೆ. ಈ ಹಿಂದೆ ದಿಶಾ ಸಾವಿನ ಬಗ್ಗೆ ಎಸ್‌ಐಟಿ ತನಿಖೆ ನಡೆಸಿತ್ತು. ಅಂದು ರಾಜಕೀಯ ಪ್ರಭಾವ ಬಳಸಿ, ಕೇಸ್ ಮುಚ್ಚಿ ಹಾಕಿದ್ದರು. ಬದಲಾದ ಪರಿಸ್ಥಿತಿಯಲ್ಲಿ ಸಿಬಿಐನಿಂದ ತನಿಖೆ ಆಗಬೇಕು. ಆದಿತ್ಯ ಠಾಕ್ರೆ ವಿರುದ್ಧ ಎಫ್ಐಆರ್ ದಾಖಲಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಠಾಕ್ರೆ ಹೇಳಿದ್ದೇನು..?

ತಮ್ಮ ಮೇಲಿನ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಆದಿತ್ಯಠಾಕ್ರೆ, ನನ್ನ ಇಮೇಜ್ ಹಾಳು ಮಾಡಲು ಬಿಜೆಪಿ ಆರೋಪ ಮಾಡಿಸಿದೆ. ಒಂದು ವೇಳೆ ಕೇಸ್ ಕೋರ್ಟ್​ನಲ್ಲಿದ್ದರೆ ನ್ಯಾಯಾಲಯದಲ್ಲೇ ಉತ್ತರಿಸುತ್ತೇನೆ ಎಂದಿದ್ದಾರೆ.

Leave a Comment