ದೆಹಲಿ: ಭಾರತದ ಚಂದ್ರಯಾನ - 3 ಮಿಷನ್‌ಗೆ ದೊಡ್ಡ ಯಶಸ್ಸು ಸಿಕ್ಕಿದ್ದು, ವಿಕ್ರಂ ಲ್ಯಾಂಡರ್ ನೌಕೆಯಿಂದ ಯಶಸ್ವಿಯಾಗಿ ಬೇರ್ಪಟ್ಟಿದೆ. ಈ ಮೂಲಕ ವಿಕ್ರಂ ಲ್ಯಾಂಡರ್ ಚಂದ್ರನತ್ತ ಕಾಲಿಡಲು ಇನ್ನೊಂದೇ ಹೆಜ್ಜೆ ಬಾಕಿ ಇದೆ. ನೌಕೆಯಿಂದ ಬೇರ್ಪಟ್ಟ ವಿಕ್ರಮ್ ಲ್ಯಾಂಡರ್ ಇನ್ನು ಚಂದ್ರನ ಮೇಲೆ ಲ್ಯಾಂಡ್ ಆಗುವತ್ತ ಹೆಜ್ಜೆ ಇಟ್ಟಿದೆ. ಮುಂದಿನ ಬುಧವಾರ ಅಂದರೆ, ಆಗಸ್ಟ್ 23, 2023 ಕ್ಕೆ ಚಂದ್ರನ ಮೇಲೆ ಕಾಲಿಡುವ ನಿರೀಕ್ಷೆ ಇದೆ.
ಚಂದ್ರಯಾನ -3 ರ ಲ್ಯಾಂಡರ್ 'ವಿಕ್ರಮ್' ಯಶಸ್ವಿಯಾಗಿ ಬಾಹ್ಯಾಕಾಶ ನೌಕೆಯಿಂದ ಬೇರ್ಪಟ್ಟಿದೆ ಮತ್ತು ಈಗ ಆಗಸ್ಟ್ 23 ರಂದು ಚಂದ್ರನ ಮೇಲೆ ಇಳಿಯುವ ನಿರೀಕ್ಷೆಯಿದೆ. ಈ ಬಗ್ಗೆ ಅಧಿಕೃತ ಮಾಹಿತಿ
ನೀಡಿದ ಇಸ್ರೋ "LM ಅನ್ನು ಪ್ರೊಪಲ್ಷನ್ ಮಾಡ್ಯೂಲ್ (PM) ನಿಂದ ಯಶಸ್ವಿಯಾಗಿ ಬೇರ್ಪಡಿಸಲಾಗಿದೆ. ನಾಳೆಗೆ ಯೋಜಿಸಲಾದ ಡೀಬೂಸ್ಟಿಂಗ್ ಮೇಲೆ LM ಸ್ವಲ್ಪ ಕಡಿಮೆ ಕಕ್ಷೆಗೆ ಇಳಿಯಲಿದೆ" ಎಂದು ISRO ಟ್ವೀಟ್‌ನಲ್ಲಿ ತಿಳಿಸಿದೆ.















