ಬಂಟ್ವಾಳ :ಶ್ರಿ ಸಾಯಿ ಕಿಡ್ಸ್ ಜೋನ್ ವಿದ್ಯಾ ಸಂಸ್ಥೆ ಬಿ ಸಿ ರೋಡ್ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು,ದ್ವಜಾರೋಹಣ ವನ್ನು ಶಾಲೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಅಭಿಲಾಷ್ ಭಟ್ ರವರು ನೆರವೇರಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಶಿಲ್ಪ ತೇಜಸ್,ಸಂಘದ ಕೋಶಾಧ್ಯಕ್ಷ ರಾದ ಜ್ಞಾನೇಶ ರಾವ್ ,ಆಡಳಿತ ಮಂಡಳಿಯ ರಾಜೇಶ್ ಅಮೀನ್, ಆರತಿ ಅಮೀನ್ ,ಶಾಲಾ ಸಂಚಾಲಕರಾದ ಐತಪ್ಪ ಪೂಜಾರಿ ವೇದಿಕೆಯಲ್ಲಿದ್ದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಅತಿಥಿಗಳು ಬಹುಮಾನ ವಿತರಿಸಿ ಶುಭ
ಹಾರೈಸಿದರು.
ಸಂಸ್ಥೆಯ ಎಲ್ಲಾ ವಿದ್ಯಾರ್ಥಿ ಸಾಂಸ್ಕೃತಿಕ ವೈವಿಧ್ಯಮಯ ಕಾರ್ಯಕ್ರಮಗಳು ನಡೆದವು. ನರ್ಸರಿ ಟೀಚೆರ್ಸ್ ತರಬೇತಿ ವಿದ್ಯಾರ್ಥಿಗಳಿಂದ ಪ್ರಾರ್ಥನೆ ಯೊಂದಿಗೆ ಕಾರ್ಯಕ್ರಮ ಪ್ರಾರಂಬಿಸಲಾಯಿತುಕಾರ್ಯಕ್ರಮ ದಲ್ಲಿ ಯುಕೆಜಿ ವಿದ್ಯಾರ್ಥಿಗಳಾದ ತಕ್ಷ್ N ಶೆಟ್ಟಿ ಸ್ವಾಗತಿಸಿ, ಆಯುಷ್ ಭಟ್ ವಂದಿಸಿ, ಶಿವಾಂಶ. ಟಿ ಕುಲಾಲ್ ಕಾರ್ಯಕ್ರಮ ನಿರೂಪಿದರು.















