ನವದೆಹಲಿ : ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ಪ್ರವಾದಿ ಮೊಹಮ್ಮದ್‌ರನ್ನು ಅವಮಾನಿಸಿದ ವಿಷಯದಲ್ಲಿ ಅಲ್‌ಖೈದಾ ಉಗ್ರರ ನಂತರ ಇದೀಗ ಐಸಿಸ್ ಖೊರಾಸನ್ ಪ್ರಾವಿನ್ಸ್ ಉಗ್ರರು ಕೂಡ ಹಿಂದುಗಳ ಮೇಲೆ ಸೇಡು ತೀರಿಸಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ.
ಈ ಕುರಿತು ವಿಡಿಯೋ ಬಿಡುಗಡೆ ಮಾಡಿರುವ ಸಂಘಟನೆ, ಭಾರತದ ಮೇಲೆ ಶೀಘ್ರದಲ್ಲೇ ಭಯೋತ್ಪಾದಕ ದಾಳಿ ನಡೆಸುವುದಾಗಿ ನೇರ ಎಚ್ಚರಿಕೆ ನೀಡಿದೆ.
ಖೊರಾಸನ್ ಡೈರಿ ಎಂಬ ನ್ಯೂಸ್ ವೆಬ್‌ಸೈಟಿನಲ್ಲಿ ಈ ಕುರಿತ ವಿಡಿಯೋ ಪ್ರಸಾರವಾಗಿದೆ. ಅದರಲ್ಲಿ 'ಭಾರತದಾದ್ಯಂತ ಇರುವ ಮುಸ್ಲಿಮರು ನಮ್ಮ ಜೊತೆ ಕೈಜೋಡಿಸಬೇಕು. ಇಸ್ಲಾಮಿಕ್ ಸ್ಟೇಟ್ ಹಿಂದ್
ಪ್ರಾವಿನ್ಸ್ ತನ್ನ ಮೌನ ಮುರಿದು ಎದ್ದು ಕುಳಿತುಕೊಳ್ಳಬೇಕು' ಎಂದು ಐಎಸ್‌ಕೆಪಿಯಿಂದ 55 ಪುಟಗಳ ಕರಪತ್ರ ಬಿಡುಗಡೆ ಮಾಡಿರುವುದಾಗಿ ಹೇಳಲಾಗಿದೆ. ಅಲ್ಲದೆ, ವಿಡಿಯೋದಲ್ಲಿ ತಾಲಿಬಾನ್ ಹಾಗೂ ಅಷ್ಘಾನಿಸ್ತಾನದ ಸಚಿವರು ಭಾರತದ ಜೊತೆ ಸಂಬಂಧ ಸ್ಥಾಪಿಸಿಕೊಳ್ಳಲು ಮುಂದಾಗಿರುವುದನ್ನು ಖಂಡಿಸಲಾಗಿದೆ. ಕೊನೆಯಲ್ಲಿ ಭಾರತದ ಮೇಲೆ ಶೀಘ್ರದಲ್ಲೇ ದಾಳಿ ನಡೆಸುವುದಾಗಿ ಎಚ್ಚರಿಕೆ ನೀಡಲಾಗಿದೆ.
















