ಶ್ರೀನಗರ: ಗೋವು ಕಳ್ಳಸಾಗಾಣಿಕೆದಾರರನ್ನು ಹೊಡೆದು ಕೊಲ್ಲುವಂಥ ಘಟನೆಗಳು ಹಾಗೂ ಕಾಶ್ಮೀರದಲ್ಲಿ ದಶಕಗಳ ಹಿಂದೆ ನಡೆದಿದ್ದ ನರಮೇಧದ ಘಟನೆಗಳು ಒಂದೇ ಎಂದು ಹೇಳುವ ಮೂಲಕ ತಮಿಳು ನಟಿ ಸಾಯಿ ಪಲ್ಲವಿ ವಿವಾದಕ್ಕೀಡಾಗಿದ್ದಾರೆ.
ಇತ್ತೀಚೆಗೆ ಬಿಡುಗಡೆಯಾಗಿದ್ದ ದ ಕಾಶ್ಮೀರ್ ಫೈಲ್ಸ್ ಚಿತ್ರದ ಬಗ್ಗೆ ತಮ್ಮ ಅನಿಸಿಕೆಯನ್ನು ಹಂಚಿಕೊಳ್ಳುವಾಗ ಈ ರೀತಿ ಹೇಳಿದ್ದು, ಇದರ ಬಗ್ಗೆ ನೆಟ್ಟಿಗರಿಂದ ಮಿಶ್ರ
ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕೆಲವರು, “ಇದೊಂದು ಮೂರ್ಖತನದ ಹೇಳಿಕೆ’ ಎಂದು ಟೀಕಿಸಿದ್ದರೆ, ಇನ್ನೂ ಕೆಲವರು “ಸತ್ಯವನ್ನು ನೇರವಾಗಿ ಹೇಳಿದ ನಿಮ್ಮ ಧೈರ್ಯ ಮೆಚ್ಚುವಂಥದ್ದು’ ಎಂದು ಹೊಗಳಿದ್ದಾರೆ.
















