ಚಂಡೀಘಡ: ರೈತ ಹೋರಾಟದಲ್ಲಿ ದೆಹಲಿಯ ಕೆಂಪು ಕೋಟೆಯಲ್ಲಿ ಖಲಿಸ್ತಾನ್ ಧ್ವಜ ಹಾರಿಸಿದ್ದ ನಟ ದೀಪ್ ಸಿಧು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ಪಂಜಾಬಿ ಸಿನಿಮಾ ನಟ,ದೆಹಲಿ ಸಮೀಪದ ಕೆಎಂಪಿ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿ ಸಾವು ಕಂಡಿದ್ದಾರೆ. ಲಾರಿ ಹಿಂಭಾಗಕ್ಕೆ ಅತೀ ವೇಗವಾಗಿ ಡಿಕ್ಕಿ ಹೊಡೆದ ಪರಿಣಾಮ ದೀಪ್ ಸಿಧು ತೀವ್ರವಾಗಿ ಗಾಯಗೊಂಡು ನಿಧನರಾಗಿದ್ದಾರೆ. ದೀಪ್
ಸಿಧು ಪ್ರಯಾಣಿಸುತ್ತಿದ್ದ ಕಾರಿನಲ್ಲಿ ರೀನಾ ಅನ್ನೋ ಯುವತಿ ಕೂಡ ಇದ್ದರು. ಅಪಘಾತದಲ್ಲಿ ರೀನಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ರೈತ ಹೋರಾಟದಲ್ಲಿ ದೀಪ್ ಸಿಧು ವಿರುದ್ಧ ಪ್ರಕರಣ ದಾಖಲಾಗಿ ತದ ನಂತರ ಬಂಧನವಾಗಿ ಜಾಮೀನನಲ್ಲಿ ಬಿಡುಗಡೆಯಾಗಿದ್ದರು.














