Coastal Bulletin

ಬಂಟ್ವಾಳ: ಕಳ್ಳಿಗೆ ಗ್ರಾಮದ ದೇವಂದಬೆಟ್ಟು ಶ್ರೀ ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವ ಮತ್ತು ವಾರ್ಷಿಕ ಜಾತ್ರೆ ಪ್ರಯುಕ್ತ ಮಂಗಳವಾರ ಸಂಜೆ ಬಿ.ಸಿ.ರೋಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಆಕರ್ಷಕ ಹೊರೆಕಾಣಿಕೆ ಮೆರವಣಿಗೆ ನಡೆಯಿತು.

ನೂರಾರು ಮಂದಿ ಯುವಕರು ಬೈಕ್ ಮತ್ತು ವಿವಿಧ ವಾಹನಗಳಲ್ಲಿ ಹೊರೆಕಾಣಿಕೆ ಮೆರವಣಿಗೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು. ವಿವಿಧ ಯುವಕ ಮತ್ತು ಮಹಿಳಾ ತಂಡಗಳ ಭಜನೆ, ಚೆಂಡೆ, ಬ್ಯಾಂಡು, ವಾಲಗ ಮತ್ತು ಗೊಂಬೆ ಕುಣಿತ ಮೆರವಣಿಗೆಗೆ ವಿಶೇಷ

ಮೆರುಗು ನೀಡಿತು.

ನೀರಿಕ್ಷೆ ಮೀರಿ ಹೊರೆಕಾಣಿಕೆಯು ಹರಿದು ಬಂದಿದ್ದು ಉಗ್ರಾಣ ತುಂಬಿ ತುಳುಕುತಿದೆ. 60ಕ್ಕೂ ಅಧಿಕ ವಾಹನಗಳಲ್ಲಿ ಹೊರೆಕಾಣಿಕೆ ಬಂದಿದ್ದು, ಆಸ್ತಿಕ ಭಕ್ತರು ಸಂಭ್ರಮ ಉಲ್ಲಾಸದಿಂದ ಹೊರೆಕಾಣಿಕೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು,ದೇವಂದಬೆಟ್ಟು ಪರಿಸರದಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ. 

Leave a Comment