ಪಾಟ್ನಾ: ಮೇವು ಹಗರಣದ ವಿಷಯವಾಗಿ ಲಾಲ್ ಪ್ರಸಾದ್ ಯಾದವ್ ಗೆ ಶಿಕ್ಷೆಯಾಗಿದೆ. ಈ ಪ್ರಕರಣವು ಡೊರಾಂಡಾ ಖಜಾನೆಯಿಂದ 139 ಕೋಟಿ ರೂಪಾಯಿಗಳನ್ನು ಅಕ್ರಮವಾಗಿ ಹಿಂತೆಗೆದುಕೊಳ್ಳುವುದಕ್ಕೆ ಸಂಬಂಧಪಟ್ಟದಾಗಿದೆ. ರಾಂಚಿಯ ಸಿಬಿಐ ವಿಶೇಷ ನ್ಯಾಯಾಲಯ ಈ ತೀರ್ಪು ನೀಡಿದೆ. ಸದ್ಯಕ್ಕೆ ಶಿಕ್ಷೆಯ ಪ್ರಮಾಣ ಇನ್ನಷ್ಟೇ ಪ್ರಕಟವಾಗಬೇಕಷ್ಟೆ.
ಈ ಹಿಂದೆಯೂ ಇವರು ಮೇವು ಹಗರಣದ ಪ್ರಕರಣದಲ್ಲಿ 14 ವರ್ಷಗಳ ಕಾಲ ಶಿಕ್ಷೆಯಾಗಿತ್ತು. ಸದ್ಯಕ್ಕೆ ಲಾಲ್ ಪ್ರಸಾದ್
ಯಾದವ್ ನ ಆರೋಗ್ಯ ಸ್ಥಿತಿ ಸರಿಯಿಲ್ಲ. ಈ ಕಾರಣಗೋಸ್ಕರ ಸಿಬಿಎ ಕೋರ್ಟ್ ಶಿಕ್ಷೆ ಕಡಿಮೆ ಮಾಡಬಹುದು ಎನ್ನಲಾಗಿದೆ.














