ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆಯ ಯಶಸ್ವಿಯ ನಂತರ ಭಾರತ್ ನ್ಯಾಯ್ ಯಾತ್ರೆಗೆ ಕ್ಷಣಗಣನೆ.

Coastal Bulletin
ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆಯ ಯಶಸ್ವಿಯ ನಂತರ ಭಾರತ್ ನ್ಯಾಯ್ ಯಾತ್ರೆಗೆ ಕ್ಷಣಗಣನೆ.

ನವದೆಹಲಿ: ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್‌ ಪಕ್ಷ ಆಯೋಜಿಸಿದ್ದ ಬೃಹತ್ ಭಾರತ್ ಜೋಡೋ ಯಾತ್ರೆ (Bharat Jodo Yatra) ಭರ್ಜರಿ ಯಶಸ್ಸನ್ನು ಗಳಿಸಿತ್ತು. ಈ ಯಾತ್ರೆಯು ರಾಹುಲ್‌ ಗಾಂಧಿಗೆ (Rahul Gandhi) ಹೆಸರನ್ನು ತಂದುಕೊಟ್ಟಿದ್ದು ಮಾತ್ರವಲ್ಲದೇ, ರಾಗಾ ಇಮೇಜ್‌ಅನ್ನು ಬದಲಾಯಿಸಿತ್ತು.

ಇದೀಗ ಭಾರತ್ ಜೋಡೋ ಯಾತ್ರೆಯ ಯಶಸ್ಸನ್ನು ಗುರಿಯಾಗಿಸಿಕೊಂಡು ಮತ್ತೊಂದು ಬೃಹತ್ ಯಾತ್ರೆಗೆ ಕಾಂಗ್ರೆಸ್‌ ಮುಂದಾಗಿದೆ. ಭಾರತ್ ಜೋಡೋ ಯಾತ್ರೆಯ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೊಂದು ಹೊಸ ಪ್ರಯಾಣ ಆರಂಭಿಸಲಿದ್ದಾರೆ. ಈ ಯಾತ್ರೆಗೆ ‘ಭಾರತ್ ನ್ಯಾಯ್ ಯಾತ್ರೆ’ (Bharat Nyaya Yatra) ಎಂದು ಹೆಸರು ಇಡಲಾಗಿದೆ. ಆ ಮೂಲಕ ಮತ್ತೊಂದು ಯಾತ್ರೆಯನ್ನು ನಡೆಸಿ ಕಾಂಗ್ರೆಸ್‌ ಪಕ್ಷವನ್ನುಜೊತೆಗೆ ಲೋಕಸಭಾ

ಚುನಾವಣೆಗೂ ಮುನ್ನ ಜನರನ್ನು ತಮ್ಮತ್ತ ಸೆಳೆಯಲು ಕಾಂಗ್ರೆಸ್ ನಿರ್ಧರಿಸಿದೆ.

ರಾಹುಲ್ ಗಾಂಧಿ ಅವರ ‘ಭಾರತ್ ನ್ಯಾಯ್ ಯಾತ್ರೆ’ಯು ಮಣಿಪುರದಿಂದ ಮುಂಬೈ ತನಕ ನಡೆಯಲಿದ್ದು, ಇದು ಜನವರಿ 14 ರಿಂದ ಮಾರ್ಚ್ 20 ರವರೆಗೆ ನಡೆಯಲಿದೆ. ಈ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ಪಕ್ಷದ ಸಂಘಟನೆ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ರ್ಯಾಲಿ ಅದ್ಧೂರಿಯಾಗಿ ನಡೆಯಲಿದೆ. ಇದರಲ್ಲಿ ಎಲ್ಲಾ ಮುಖಂಡರು, ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

Leave a Comment