Coastal Bulletin

ಮಂಗಳೂರು:ಕರ್ನಾಟಕದಲ್ಲಿ ಬಿಜೆಪಿ ದಲಿತರನ್ನು ಮುಖ್ಯಮಂತ್ರಿ ಮಾಡಲಿ. ಈಗ ಹೇಗೂ ಸೀಟು ಖಾಲಿ ಇದ್ದು ದಲಿತರಿಗೆ ಅವಕಾಶ ನೀಡಲಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗೆ ಸವಾಲು ಹಾಕಿದ್ದಾರೆ.

ಸಿಎಂ ಬದಲಾವಣೆ ಬಗ್ಗೆ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ ಕೆಲವು ತಿಂಗಳ ಹಿಂದೆ ಮುಖ್ಯಮಂತ್ರಿ ಬದಲಾಗ್ತಾರೆ ಎಂದು ನಾನು ಹೇಳಿದ್ದೆ. ನಂಗೆ ಖಚಿತವಾದ ಮಾಹಿತಿಯಿತ್ತು. ಆದರೆ, ನಳಿನ್‌ ಕುಮಾರ್ ಕಟೀಲ್ ನನಗೊಂದು ಸವಾಲು ಹಾಕಿದ್ದರು. ಸಿದ್ದರಾಮಯ್ಯ ದಲಿತರನ್ನು‌ ಮುಖ್ಯಮಂತ್ರಿ ಘೋಷಣೆ ಮಾಡಲಿ ಎಂದು ಹೇಳಿದ್ದರು. ನಮ್ಮಲ್ಲಿ ನಾಲ್ಕು ಜನ ಮುಖ್ಯಮಂತ್ರಿ ಆಗಿದ್ದಾರೆ. ಈಗ ಬಿಜೆಪಿಯವರಿಗೆ ದಲಿತ ಮುಖ್ಯಮಂತ್ರಿ ಮಾಡಲು ಇದೊಂದು ಅವಕಾಶ ಎಂದಿದ್ದಾರೆ.

ಉತ್ತರ ಕರ್ನಾಟಕದಲ್ಲಿ ಈಗ ಮಳೆಯಾಗಿ ಮನೆಗಳು ಬಿದ್ದು ಹೋಗಿ, ಪ್ರಾಣಿಗಳು ಕೊಚ್ಚಿ ಹೋಗುತ್ತಿದ್ದರೆ ಇವರು ಮುಖ್ಯಮಂತ್ರಿ ಬದಲಾವಣೆಯ ಕಸರತ್ತು ಮಾಡುತ್ತಿದ್ದಾರೆ. ಮುಂದೆ ಯಾರು ಮುಖ್ಯಮಂತ್ರಿ ಆಗ್ತಾರೋ ಗೊತ್ತಿಲ್ಲ. ಯಾರೇ ಬಂದ್ರೂ ಬಿ.ಜೆ.ಪಿ ಒಂದು ಕರಪ್ಟ್ ಪಾರ್ಟಿ.‌ ಮುಂದೆ ಮುಖ್ಯಮಂತ್ರಿ ಆಗಿ ಬರೋನು ಕರಪ್ಟ್ ಆಗಿಯೇ ಇರ್ತಾನೆ. ಹೀಗೆಂದು ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿ ಸರಕಾರದ ಬಗ್ಗೆ ಜರೆದಿದ್ದಾರೆ.‌

ಬಿಜೆಪಿ ಅಧಿಕಾರದಿಂದ ಎಷ್ಟು ಬೇಗ ತೊಲಗುತ್ತೆ ಅಷ್ಟು ಬೇಗ ರಾಜ್ಯಕ್ಕೆ ಒಳ್ಳೆದಾಗುತ್ತೆ.ಮಠಾಧೀಶರು ರಾಜಕಾರಣಕ್ಕೆ ಕೈ ಹಾಕಬಾರದು. ಅವರ ಅಭಿಪ್ರಾಯ ಹೇಳೊದು ಬೇರೆ ವಿಚಾರ. ಆದ್ರೆ ಜನರ ಅಭಿಪ್ರಾಯ ಬಹಳ ಮುಖ್ಯ. ಅದರ ಮೇಲೆ ತಮ್ಮ ಮಾತನ್ನು ಹೇರಿಕೆ ಮಾಡುವುದು ಸರಿಯಲ್ಲ. ಅಲ್ಲದೆ, ಮಠಾಧೀಶರಾಗಿ ಒಂದು ಪಕ್ಷದ ಆಂತರಿಕ

ವಿಚಾರದಲ್ಲಿ ಮೂಗು ತೂರಿಸುವುದ ತಪ್ಪು ಎಂದರು.

ಫೋನ್ ಕದ್ದಾಲಿಕೆಯಿಂದ ಸಮ್ಮಿಶ್ರ ಸರ್ಕಾರ ಪತನ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಫೋನ್ ಕದ್ದಾಲಿಕೆ ಇದೇ ಮೊದಲಲ್ಲ, ಬಿಜೆಪಿ ಈ ಹಿಂದೆಯೂ ಮೊದಲು ಮಾಡಿತ್ತು. 2019ರಲ್ಲಿ ನನ್ನ ಪಿಎ ವೆಂಕಟೇಶ್ ಫೋನ್ ಕದ್ದಾಲಿಕೆ ಮಾಡಿದ್ದಾರೆ.‌ ಕುಮಾರಸ್ವಾಮಿ, ಜಿ.ಪರಮೇಶ್ವರ್ ಸೇರಿ ಹಲವರ ಫೋನ್ ಕದ್ದಾಲಿಕೆ ಮಾಡಿದ್ದಾರೆ. ಸಮ್ಮಿಶ್ರ ಸರ್ಕಾರ ಕಿತ್ತು ಹಾಕಲು ಏನು ಬೇಕೋ ಅದೆಲ್ಲಾ ಅಕ್ರಮ ಮಾಡಿದ್ದಾರೆ. ನಾನು ಈ ಬಗ್ಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಮೂಲಕ ತನಿಖೆಯಾಗಬೇಕೆಂದು ಆಗ್ರಹಿಸುತ್ತೇನೆ.ಇದೊಂದು ಪ್ರಜಾಪ್ರಭುತ್ವದ ಕೊಲೆ, ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಜಡ್ಜ್ ಗಳದ್ದೇ ಫೋನ್ ಕದ್ದಾಲಿಸೋದು ದೇಶದ್ರೋಹದ ಕೆಲಸ. ಇವರಿಗೆ ಸರ್ಕಾರ ಮಾಡೋಕೆ ಯೋಗ್ಯತೆ ಇಲ್ಲ, ನಾಲಾಯಕ್ ಗಳು ಎಂದು ವಾಗ್ದಾಳಿ ನಡೆಸಿದ್ದಾರೆ. 

ಪಕ್ಷ ಬಿಟ್ಟವರನ್ನು ಯಾವ ಕಾರಣಕ್ಕೂ ವಾಪಸು ತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ. ಎಲ್ಲಾ ಒಟ್ಟಾಗಿ ಹೋಗಿ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಭ್ರಷ್ಟ ಸರ್ಕಾರನ ಕಿತ್ತು ಬಿಸಾಕಿ ಪಕ್ಷ ಬಲ‌ಪಡಿಸಿ‌ ಎಂದಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಮರಳಿ ಅಧಿಕಾರಕ್ಕೆ ತನ್ನಿ ಎಂದು ಕರೆ ನೀಡಿದ್ದಾರೆ. ಅದನ್ನು ನಾವು ಒಟ್ಟಾಗಿ ಸೇರಿ ಮಾಡುತ್ತಿದ್ದೇವೆ ಎಂದರು.


Leave a Comment