Coastal Bulletin

ಕಾಸರಗೋಡು : ಜಿಲ್ಲೆಯ ಮಂಜೇಶ್ವರ ಹಾಗೂ ಅಲ್ಲಿನ ಕೆಲವು ಗ್ರಾಮಗಳ ಕನ್ನಡದ ಹೆಸರುಗಳನ್ನು ಮಲಯಾಳಂ ಭಾಷೆಗೆ ಬದಲಾಯಿಸುವ ಕೇರಳ ಸರ್ಕಾರದ ನಡೆಯನ್ನು ಮೈಸೂರು ಸಂಸದ ಪ್ರತಾಪ್ ಸಿಂಹ ವಿರೋಧಿಸಿದ್ದಾರೆ.

ಈ ಬಗ್ಗೆ ಪತ್ರಿಕೆಯಲ್ಲಿ ವರದಿಯಾಗಿರುವ ಹೆಸರು ಬದಲಾವಣೆಯ ಪಟ್ಟಿಯನ್ನು ಟ್ವಿಟರ್ ಖಾತೆಯಲ್ಲಿ ಲಗತ್ತಿಸಿ ಕೇರಳ ಸರಕಾರದ ನಡೆಗೆ ವಿರೋಧ ವ್ಯಕ್ತಪಡಿಸಿ ಕರ್ನಾಟಕ ಸರ್ಕಾರ ಇದಕ್ಕೆ ತಕ್ಷಣ ತನ್ನ ವಿರೋಧ ವ್ಯಕ್ತಪಡಿಸಬೇಕು ಮತ್ತು ಕೇರಳ ಸಿಎಂ  ಪಿಣರಾಯಿ ವಿಜಯನ್  ಜೊತೆ ಮಾತನಾಡಿ ಇಂಥ ಕನ್ನಡ ವಿರೋಧಿ ಕೆಲಸವನ್ನು

ತಡೆಯಬೇಕು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಲ್ಲಿ ಆಗ್ರಹಿಸಿದ್ದಾರೆ.

ಕೇರಳ ಸರಕಾರದ ಮಲಯಾಲೀಕರಣದ ಭಾಗವಾಗಿ ಕಾಸರಗೋಡು ಜಿಲ್ಲೆಯಲ್ಲಿರುವ ಅಪ್ಪಟ ಕನ್ನಡದ ಊರುಗಳ ಹೆಸರನ್ನು ಮಲಯಾಳಕ್ಕೆ ತರ್ಜುಮೆಗೊಳಿಸಿ ಮರು ನಾಮಕರಣ ಮಾಡಿ  ಕನ್ನಡದ ಹೆಸರುಗಳಿಗೆ ಕೊನೆ ಮೊಳೆ ಹೊಡೆಯುವ ಕೇರಳ ಸರಕಾರದ ಪ್ರಸ್ತಾಪಕ್ಕೆ ಭಾರೀ ವಿರೋಧ ಕೇಳಿಬಂದಿದೆ.

Leave a Comment