ದೆಹಲಿ : ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ವಿದೇಶ ಪ್ರಯಾಣ ಮಾಡುವವರಿಗಾಗಿ ಈ ಮಾಹಿತಿ. ಕೋವಿನ್ ಈಗ ಬಳಕೆದಾರರಿಗೆ ತಮ್ಮ ಪಾಸ್‌ಪೋರ್ಟ್ ಸಂಖ್ಯೆಯನ್ನು ಕೋವಿಡ್ ಲಸಿಕೆ ಪ್ರಮಾಣಪತ್ರದಲ್ಲಿ ಲಿಂಕ್ ಮಾಡಲು ಅವಕಾಶ ನೀಡಿದೆ. ಕೋವಿಡ್ ಲಸಿಕೆ ಪ್ರಮಾಣಪತ್ರಗಳನ್ನು ಪ್ರಯಾಣದ ಸಮಯದಲ್ಲಿ ಬಳಸಲಾಗುವ ಹಿನ್ನೆಲೆಯಲ್ಲಿ ಇದು ಸಹಕಾರಿಯಾಗಲಿದೆ.
ನೀವು ನಿಮ್ಮ ವ್ಯಾಕ್ಸಿನೇಷನ್ ಪ್ರಮಾಣಪತ್ರದಲ್ಲಿ ನಿಮ್ಮ ಪಾಸ್‌ಪೋರ್ಟ್ ಸಂಖ್ಯೆಯನ್ನು ಲಿಂಕ್ ಮಾಡಬಹುದು,'' ಎಂದು ಆರೋಗ್ಯ ಸೇತು ಅಪ್ಲಿಕೇಶನ್‌ನ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ.
ಶಿಕ್ಷಣ, ಉದ್ಯೋಗಗಳಿಗಾಗಿ ವಿದೇಶಕ್ಕೆ ಪ್ರಯಾಣಿಸುವವರು ಅಥವಾ
ಟೋಕಿಯೊ ಒಲಿಂಪಿಕ್ ಕ್ರೀಡಾಕೂಟಕ್ಕಾಗಿ ಪ್ರವಾಸ ಮಾಡುವವರು ಪಾಸ್‌ಪೋರ್ಟ್‌ಗೆ ಲಿಂಕ್ ಮಾಡಲಾದ ಲಸಿಕೆ ಪ್ರಮಾಣಪತ್ರಗಳನ್ನು ಪಡೆಯಬೇಕಾಗಿದೆ. ಹಾಗಾದರೆ ಪಾಸ್‌ಪೋರ್ಟ್ ಅನ್ನು ಲಸಿಕೆ ಪ್ರಮಾಣಪತ್ರಕ್ಕೆ ಲಿಂಕ್ ಮಾಡುವುದು ಹೇಗೆಂಬ ಸಂಪೂರ್ಣ ಮಾಹಿತಿ ಇಲ್ಲಿದೆ.















