Coastal Bulletin

ಉದ್ಯಮಿ ಮುಸ್ತಫಾ ರಾಜ್ ಹಾಗೂ ಪಂಚ ಭಾಷಾ ನಟಿ ಪ್ರಿಯಾಮಣಿ ವಿರುದ್ಧ ಮುಸ್ತಫಾ ರಾಜ್ ಅವರ ಮೊದಲ ಪತ್ನಿ ಆಯೆಷಾ ಕ್ರಿಮಿನಲ್ ಕೇಸ್ ದಾಖಲು ಮಾಡಿದ್ದಾರೆ.

ನನಗೆ ವಿಚ್ಛೇಧನವನ್ನೇ ನೀಡದೇ ಮುಸ್ತಾಫಾ ಪ್ರಿಯಾಮಣಿ ಅವ್ರನ್ನ ಮದುವೆಯಾಗಿದ್ದಾರೆ. ನಾನು ಈಗಲೂ ಅವರ ಪತ್ನಿ.ಪ್ರಿಯಾಮಣಿ ಅವರನ್ನು ಮದುವೆಯಾಗುವಾಗ, ತಾವು ಬಾಚ್ಯುಲರ್ ಎಂದು ಕೋರ್ಟ್‌ನಲ್ಲಿ ಮುಸ್ತಫಾ ರಾಜ್ ಘೋಷಿಸಿಕೊಂಡಿದ್ದರು.ನಾವಿನ್ನೂ ವಿಚ್ಛೇದನಕ್ಕೆ ಅರ್ಜಿಯೇ ಹಾಕಿಲ್ಲ.ಹಾಗಾಗಿ ಮುಸ್ತಾಫಾ ಹಾಗೂ ಪ್ರಿಯಾಮಣಿ ಅವರ ಮದುವೆ ಅಸಿಂಧುವಾಗಿದೆ ಅಂದಿದ್ದಾರೆ ಆಯೇಶಾ.ಮುಸ್ತಫಾ ರಾಜ್ ವಿರುದ್ಧ ಕೌಟುಂಬಿಕ ಹಿಂಸಾಚಾರದ ಪ್ರಕರಣವನ್ನೂ ಆಯೆಷಾ ದಾಖಲಿಸಿದ್ದಾರೆ. ಮುಸ್ತಫಾ ರಾಜ್ ಹಾಗೂ ಆಯೆಷಾ ದಾಂಪತ್ಯದ ಫಲವಾಗಿ ಇಬ್ಬರು ಮಕ್ಕಳಿದ್ದಾರೆ.

ಆಯೇಶಾ ಮಾಡಿರುವ ಆರೋಪವನ್ನ ತಳ್ಳಿ ಹಾಕಿರುವ ಮುಸ್ತಾಫಾ ನನ್ನ ವಿರುದ್ಧ ಸುಖಾಸುಮ್ಮನೆ ಆರೋಪಿಸಲಾಗುತ್ತಿದೆ. ನಾನು ಆಯೆಷಾ ಅವರಿಗೆ ಮಕ್ಕಳನ್ನು ಬೆಳೆಸುವುದಕ್ಕಾಗಿ ಹಣವನ್ನು ನೀಡುತ್ತಿದ್ದೇನೆ. ಅದಕ್ಕಿಂತಲೂ ಹೆಚ್ಚು ಹಣವನ್ನು ಪಡೆಯುವುದಕ್ಕಾಗಿ ಇಂತಹ ಆರೋಪಗಳನ್ನು ಮಾಡಲಾಗುತ್ತಿದೆ ಎಂದಿದ್ದಾರೆ. ಇನ್ನೂ ಒಂದ್ವೇಳೆ  ಕೌಟುಂಬಿಕ ದೌರ್ಜನ್ಯ ನಡೆದಿರುವುದೇ ಹೌದಾದರೆ ಇಷ್ಟು ದಿನ ಆಯೇಶಾ ಸುಮ್ಮನಿದ್ದಿದ್ದೇಕೆ ಎಂದು ಮುಸ್ತಫಾ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿರುವ ಆಯೇಶಾ ಎರಡು

ಮಕ್ಕಳ ತಾಯಿಯಾಗಿ ನಾನೇನು ಮಾಡಲಿ. ಸಾತ್ವಿಕವಾದ ದಾರಿಯಿಂದ ನಾನು ಇದನ್ನು ಸರಿದೂಗಿಸಲು ಪ್ರಯತ್ನಪಟ್ಟೆ. ಆದರೆ ಮುಸ್ತಫಾ ನನ್ನ ವಿರುದ್ಧ ತಿರುಗಿಬಿದ್ದಾಗ  ಕೆಲವೊಂದು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವುದು ನನಗೀಗ ಅನಿವಾರ್ಯವಾಗಿದೆ ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಪ್ರಿಯಾಮಣಿ ಹಾಗೂ ಮುಸ್ತಾಫಾ ಮದುವೆಯ ವಿಚಾರದಲ್ಲಿ ಮುಸ್ತಾಫಾ ಮೊದಲ ಪತ್ನಿ ಆಯೇಶಾ ತಕರಾರು ತಗೆದ ಹಿನ್ನಲೆ, ಪ್ರಿಯಾಮಣಿ ತಮ್ಮ ಮೌನ ಮುರಿದಿದ್ದಾರೆ.  ಸಂವಹನ ತುಂಬಾ ಮುಖ್ಯ. ನನ್ನ ಮತ್ತು ಮುಸ್ತಫಾ ನಡುವಿನ ಸಂಬಂಧದ ಬಗ್ಗೆ ಕೇಳುತ್ತಿದ್ರೆ, ನಾವು ನಮ್ಮ ಸಂಬಂಧದಲ್ಲಿ ತುಂಬಾ ಸುರಕ್ಷಿತವಾಗಿದ್ದೇವೆ ಎಂದಿದ್ದಾರೆ. ಮುಸ್ತಫಾ ಸದ್ಯ ವಿದೇಶದಲ್ಲಿದ್ದಾರೆ. ಆದರೆ ಪ್ರತಿದಿನ ನನ್ನ ಜೊತೆ ಸಂಪರ್ಕದಲ್ಲಿದ್ದಾರೆ, ಪ್ರತಿದಿನ ಮಾತನಾಡುತ್ತೇವೆ ಎಂದು ಹೇಳಿರುವ ಪ್ರಿಯಾಮಣಿ ಪ್ರತಿ ವಿಚಾರವನ್ನು ನಾವಿಬ್ಬರೂ ಮಾತಾಡುತ್ತೇವೆ. ಅದು ಪ್ರತಿ ಸಂಬಂಧಕ್ಕೂ ಪ್ರಮುಖವಾಗುತ್ತದೆ ಅಂದಿದ್ದಾರೆ.

2017 ಆಗಸ್ಟ್ 23 ರಂದು ನಟಿ ಪ್ರಿಯಾಮಣಿ ಹಾಗೂ ಮುಸ್ತಫಾ ರಾಜ್ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು

Leave a Comment