Coastal Bulletin

ನೀಲಿ ಜಾಲದಲ್ಲಿ ಸಿಲುಕಿ ಸದ್ಯ ಪೊಲೀಸರ ಅತಿಥಿಯಾಗಿರುವ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ, ಅಪರಾಧ ತಡೆ ವಿಭಾಗದಿಂದ ಬಂಧನಕ್ಕೊಳಗಾಗದಿರಲು ಇದುವರೆಗೆ ಸುಮಾರು 25 ಲಕ್ಷ ರೂ.ಗಳಿಗೂ ಅಧಿಕ ಲಂಚವನ್ನು ಅಧಿಕಾರಿಗಳಿಗೆ ನೀಡಿದ್ದಾರೆಯೆಂದು ಇದೇ ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ ಮತ್ತೊಬ್ಬ ಪ್ರಮುಖ ಅರೋಪಿ ಅರವಿಂದ್ ಆರೋಪ ಮಾಡಿದ್ದಾನೆ.

ಕಳೆದ ಮಾರ್ಚ್​ನಲ್ಲಿ ಅರವಿಂದ್ ​ಗೆ ಸೇರಿದ್ದ ನ್ಯೂಪಿಕ್ಸ್ ಎಂದು ಕರೆಯಲ್ಪಡುತ್ತಿದ್ದ ‘ಫ್ಲಿಜ್ ಮೂವೀಸನ್ನು ಪೊಲೀಸರು ಪತ್ತೆ ಮಾಡಿ ಅದಕ್ಕೆ ಸಂಬಂಧಪಟ್ಟ ಬ್ಯಾಂಕ್ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಅದರಲ್ಲಿ ಸುಮಾರು 4.50ಕೋಟಿಗೂ ಅಧಿಕ ಮೊತ್ತದ ಹಣ ವರ್ಗಾವಣೆಯಾದ ಬಗ್ಗೆ ಮಾಹಿತಿ ಲಭಿಸಿತ್ತು. ನಂತರ ಇಮೇಲ್ ಮೂಲಕ ಭ್ರಷ್ಟಾಚಾರ ತಡೆ ವಿಭಾಗಕ್ಕೆ ದೂರು ಸಲ್ಲಿಸಿದ್ದ. ಸದ್ಯ ಅರವಿಂದ್ ಮಾಡಿರುವ ಆರೋಪಕ್ಕೆ ಸಂಬಂಧಪಟ್ಟಂತೆ ಸೂಕ್ತ ಕ್ರಮ ಕೈಗೊಳ್ಳಲು ಮುಂಬೈ ಪೊಲೀಸರಿಗೆ ಸೂಚಿಸಲಾಗಿದೆಯೆಂದು ಎಸಿಬಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಬ್ಲೂ ಫಿಲ್ಮ್ ದಂಧೆ ಆರೋಪದಲ್ಲಿ ರಾಜ್ ಕುಂದ್ರ ಅವರನ್ನು

ಮುಂಬೈ ಪೊಲೀಸರು ಜುಲೈ 19ರಂದು ರಾತ್ರಿ ಬಂಧಿಸಿದ್ದರು. ಇದೀಗ ಜುಲೈ 23ರ ವರೆಗೂ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ರಾಜ್ ಕುಂದ್ರ ಬಂಧನದ ಬಳಿಕ ಸಾಕಷ್ಟು ಸ್ಫೋಟಕ ಮಾಹಿತಿಗಳು ಬಹಿರಂಗವಾಗುತ್ತಿದೆ. ನೀಲಿ ಚಿತ್ರದಿಂದ ಹೇಗೆಲ್ಲ ವ್ಯವಹಾರ ಮಾಡುತ್ತಿದ್ದರು, ದೊಡ್ಡ ಮೊತ್ತದ ಹಣ ಹೇಗೆ ಸಂಪಾದನೆ ಮಾಡುತ್ತಿದ್ದರು ಎಂದು ರಾಜ್ ಕುಂದ್ರ ಮತ್ತು ಅವರ ಪಾರ್ಟನರ್ ನಡೆಸಿದ ವಾಟ್ಸಪ್ ಚಾಟ್‌ಗಳಿಂದ ಬಹಿರಂಗವಾಗಿದೆ. ಅಂದ್ಹಾಗೆ ರಾಜ್ ಕುಂದ್ರಾ ಸಿಕ್ಕಾಪಟ್ಟೆ ಟ್ರೋಲ್ ಆಗ್ತಾಯಿದ್ದು, ಪೋರ್ನ್ ವಿಡಿಯೋಗಳ ಬಗ್ಗೆ ಮಾಡಿದ್ದ  ಹಳೆಯ ಟ್ವಿಟ್ ಗಳು ವೈರಲ್ ಆಗ್ತಿದೆ..

Leave a Comment