ಬಂಟ್ವಾಳ:ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿ ಪ್ರಕೃತಿ ವಿಕೋಪದಿಂದ ಹಾನಿಗೊಳಗಾದ ಕುಟುಂಬಗಳಿಗೆ ಪರಿಹಾರ ಮತ್ತು 94 ಸಿ ಹಕ್ಕು ಪತ್ರ ವಿತರಣಾ ಕಾರ್ಯಕ್ರಮ ಬಂಟ್ವಾಳದಲ್ಲಿ ನಡೆಯಿತು.
ಪಾಣೆಮಂಗಳೂರು ಹಾಗೂ ವಿಟ್ಲ ಹೋಬಳಿಯ 55 ಮಂದಿಗೆ ಪಾಕೃತಿಕ ವಿಕೋಪ ಪರಿಹಾರದಡಿ 3.12 ಲಕ್ಷದ ಚೆಕ್ ಮತ್ತು ಪಾಣೆಮಂಗಳೂರು,ಬಂಟ್ವಾಳ ಹಾಗೂ ವಿಟ್ಲ ಹೋಬಳಿಯ 36 ಮಂದಿ ಫಲಾನುಭವಿಗಳಿಗೆ ಹಕ್ಕುಪತ್ರವನ್ನು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಡೀಮ್ಡ್ ಫಾರೆಸ್ಟ್ ನಲ್ಲಿ ಹಲವಾರು ಸಮಯದಿಂದ ವಾಸ್ತವ್ಯವಿದ್ದವರಿಗೆ ಮನೆ ನೀಡಲು ಇದ್ದ ಸಮಸ್ಯೆ ಯನ್ನು ನಿವಾರಿಸಲಾಗಿದ್ದು ಬಂಟ್ವಾಳ ಕ್ಷೇತ್ರದ ವಿಟ್ಲಪಡ್ನೂರು ಮತ್ತು ಉಳಿ ಗ್ರಾಮದ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಲು ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುವುದು,ಬಂಟ್ವಾಳ ಕ್ಷೇತ್ರದಲ್ಲಿ ಈಗಾಗಲೇ ಹಕ್ಕು ಪತ್ರ ವಂಚಿತರಿಗೆ ಹಕ್ಕು
ಪತ್ರ ವಿತರಿಸುವ ಪ್ರಮಾಣಿಕ ಪ್ರಯತ್ನ ಮಾಡಲಾಗಿದೆ.ಮುಂದಿನ ದಿನಗಳಲ್ಲಿ ಬಾಕಿಯಿರುವ ಎಲ್ಲಾ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು
ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಡೊಂಬಯ್ಯ ಅರಳ, ಬಿಜೆಪಿ ಪ್ರಮುಖರಾದ ಸುನಿಲ್ ಕಾಯರ್ ಮಾರ್, ಜನಾರ್ದನ ಬೊಂಡಾಲ, ಸೀತಾರಾಮ ಅಗೊಳಿಬೆಟ್ಟು, ರಾಮಕೃಷ್ಣ ಮಯ್ಯ, ಮನೋಜ್ ಕಳ್ಳಿಗೆ, ದಿನೇಶ್ ಪೂಜಾರಿ, ವಿಜಯ ಅಮ್ಟಾಡಿ, ಕಂದಾಯ ನಿರೀಕ್ಷಕ ರಾದ ರಾಮಕಾಟಿಪಳ್ಳ, ನವೀನ್ ಬೆಂಜನಪದವು, ದಿವಾಕರ ಮುಗುಳಿ, ಗ್ರಾಮ ಕರಣೀಕರಾದ ಕರಿಬಸಪ್ಪ ನಾಯಕ್, ಮಂಜುನಾಥ್ ಕೆ.ಎಚ್, ಕುಮಾರ್ ಟಿ.ಸಿ. ವೈಶಾಲಿ, ಪ್ರದೀಪ್ ಕುಲಾಲ್ ಉಪಸ್ಥಿತರಿದ್ದರು.
















