Coastal Bulletin

ಕೇರಳ ರಾಜ್ಯ ಬಿಜೆಪಿ ಉಪಾಧ್ಯಕ್ಷ ಡಾ. ಕೆ .ಎಸ್. ರಾಧಾಕೃಷ್ಣನ್ ಅವರಿಗೆ ಐಸಿಸ್ ಭಯೋತ್ಪಾದಕ ಸಂಘಟನೆಯಿಂದ ಜೀವ ಬೆದರಿಕೆ ಕರೆ ಬಂದಿರುವುದಾಗಿ ಮೂಲಗಳು ತಿಳಿಸಿವೆ.

ಐಸಿಸ್‌ಗೆ ಸೇರಿದವನೆನ್ನಲಾದ ಅಪರಿಚಿತ ವ್ಯಕ್ತಿ 11:23 ಗಂಟೆಗೆ ಕರೆ ಮಾಡಿದ್ದಾನೆ ಎಂದು ಡಾ.ರಾಧಾಕೃಷ್ಣನ್ ತಿಳಿಸಿದ್ದಾರೆ. ಈ ಬಗ್ಗೆ ಅವರು ಎರ್ನಾಕುಳಂನಗರ ಪೊಲೀಸ್ ಆಯುಕ್ತರಿಗೆ ಇ-ಮೇಲ್ ಮೂಲಕ ದೂರು ನೀಡಿದ್ದಾರೆ.

ಕಳೆದ ಕೆಲವು ವರ್ಷಗಳಲ್ಲಿ ರಾಧಾಕೃಷ್ಣನ್ ಅವರು ಮೂರನೇ

ಬಾರಿಗೆ ಇಂತಹ ಬೆದರಿಕೆ ಎದುರಿಸಿದ್ದಾರೆ. ಈ ಹಿಂದೆ ಕೊಡಿಯೇರಿ ಬಾಲಕೃಷ್ಣನ್ ಕೇರಳ ಗೃಹಸಚಿವರಾಗಿದ್ದಾಗ ಇಂತಹ ಬೆದರಿಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಅವರಿಗೆ ಪೊಲೀಸ್ ರಕ್ಷಣೆ ನೀಡಲಾಗಿತ್ತು. ಡಾ.ರಾಧಾಕೃಷ್ಣನ್ ಕೇರಳ ಸಾರ್ವಜನಿಕ ಸೇವಾ ಆಯೋಗದ ಮಾಜಿ ಅಧ್ಯಕ್ಷರೂ ಆಗಿದ್ದಾರೆ.

Leave a Comment