Coastal Bulletin

ಖ್ಯಾತ ಕಂಬಳ ಓಟಗಾರ ಅಶ್ವತ್ ಪುರ ಶ್ರೀನಿವಾಸ್ ಗೌಡ ಅವರ ಮೊಬೈಲಿಗೆ ಕರೆ ಮಾಡಿ ಬೆದರಿಕೆ ಹಾಕಿ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಶ್ರೀರಾಮ ಸೇನೆಯ ಕಾರ್ಯಕರ್ತ ಪ್ರಶಾಂತ್ ಬಂಗೇರ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.


ಪ್ರಶಾಂತ್ ಬಂಗೇರ ಜೀವ ಬೆದರಿಕೆ ಹಾಕಿದ್ದ ಆಡಿಯೋ ರೆಕಾರ್ಡ್ ಆಗಿದ್ದು ಆನಂತರ ಜಾಲತಾಣದಲ್ಲಿ ವೈರಲ್ ಆಗಿತ್ತು.ಕಂಬಳ ಓಟಗಾರ ಉಸೇನ್ ಬೋಲ್ಟ್ ಖ್ಯಾತಿಯ ಶ್ರೀನಿವಾಸ ಗೌಡರಿಗೆ ಅವಮಾನ ಎನ್ನುವ ರೀತಿ ಕಂಬಳ ಅಭಿಮಾನಿಗಳಿಂದ ಆಕ್ರೋಶ ವ್ಯಕ್ತವಾಗಿತ್ತು. ಜಿಲ್ಲಾ ಕಂಬಳ ಸಮಿತಿಯ ಪದಾಧಿಕಾರಿಗಳು,ಒ ಮೂಡುಬಿದ್ರೆ ಶಾಸಕ ಉಮಾನಾಥ

ಕೋಟ್ಯಾನ್ ಆರೋಪಿಯನ್ನು ಬಂಧಿಸಿ ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ. ಇಷ್ಟಾಗುತ್ತಿದ್ದಂತೆ ಶ್ರೀನಿವಾಸ ಗೌಡ ಮೂಡುಬಿದ್ರೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪ್ರಶಾಂತ್ ಬಂಗೇರನನ್ನು ಮೂಡುಬಿದ್ರೆ ಪೊಲೀಸರು ವಿಚಾರಣೆಗೆಂದು ಠಾಣೆಗೆ ಕರೆಸಿ ಬಂಧಿಸಿದ್ದಾರೆ. ಬಂಗೇರ ಮಂಗಳೂರಿನ ನಿವಾಸಿಯಾಗಿದ್ದರೂ, ಶಿವಮೊಗ್ಗದಲ್ಲಿ ನೆಲೆಸಿದ್ದ ಎನ್ನಲಾಗುತ್ತಿದೆ. ಶಿವಮೊಗ್ಗದಲ್ಲಿ ರಾಮಸೇನೆ ಮುಖಂಡನಾಗಿ ಪೋಸು ಕೊಟ್ಟು ಅಲ್ಲಿಯೇ ಇರುತ್ತಿದ್ದ.

Leave a Comment