ಪೈವಳಿಕೆ: ಬಾಯರುಪದವುನಲ್ಲಿ ಆಟೋರಿಕ್ಷಾ ಚಾಲಕನಾಗಿದ್ದ ಸುದೆಂಬಳ ನಿವಾಸಿ ಮುಖೇಶ್ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ನಿನ್ನೆ ರಾತ್ರಿ 10 ಗಂಟೆಯ ಹೊತ್ತಿಗೆ ಊಟ ಮಾಡಿ ಮಲಗಿದ್ದ ಮುಖೇಶ್ ಇಂದು ಬೆಳಿಗ್ಗೆ ತಾಯಿ ಕೊಠಡಿಗೆ ಬಂದು ನೋಡಿದಾಗ ಮುಖೇಶ್ ಫ್ಯಾನ್ ಗೆ ನೇಣು ಬಿಗಿದ ಸ್ಥಿತಿಯಲ್ಲಿ ಇದ್ದರು.
ಸುದೆಂಬಳ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರ ಸಮಿತಿಯ ಉಪಾಧ್ಯಕ್ಷರಾಗಿದ್ದ ಅವರು ಮೃತರು ತಂದೆ ಕೃಷ್ಣಪ್ಪ ದೆವಾಡಿಗ ,ತಾಯಿ ಜಯಲಕ್ಷ್ಮೀ, ಸಹೋದರಿ ಪವಿತ್ರ ಇವರನ್ನು ಅಗಲಿದ್ದಾರೆ.