Coastal Bulletin

ಕಾಸರಗೋಡು: ಇತ್ತೀಚೆಗೆ ಅಕಾಲಿಕವಾಗಿ ನಿಧನರಾದ ಆರ್ ಎಸ್ ಎಸ್ ಹಾಗೂ ಬಿಜೆಪಿ ಕಾರ್ಯಕರ್ತ ಜ್ಯೋತಿಷ್ ಅವರ ನಿಧನದ ನಂತರ ಸಂಘಟನೆ ಹಾಗೂ ಬಿಜೆಪಿ ನಡೆಯಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಆರೋಪಿಸಿ ಹಲವು ಜವಾಬ್ದಾರಿಯುತ ನಾಯಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಸರಗೋಡು ಹಾಗೂ ಮಂಜೇಶ್ವರ ಮಂಡಲಗಳಲ್ಲಿ ಬಲಿದಾನಿಗಳನ್ನು ಹಾಗೂ ಪಕ್ಷದ  ಕಾರ್ಯಕರ್ತರನ್ನು ಕಡೆಗಣಿಸಿ ಉನ್ನತ ನೇತಾರರು ಎಡ- ಬಲ ರಂಗದೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಕಾರ್ಯಕರ್ತರಿಗೆ ಸಂಘಟನೆ ಹಾಗೂ ಪಕ್ಷ ಮೋಸ ಮಾಡಿದೆ ಎಂದು ಆರೋಪಿಸಿ ರಾಜೀನಾಮೆ ನೀಡಿದ್ದಾರೆ.


ಸಂಘಪರಿವಾರಗೋಸ್ಕರ ದುಡಿಯುವ ಕಾರ್ಯಕರ್ತರು ನ್ನು ಅಧಿಕಾರದ ಆಸೆಗಾಗಿ ಬಲಿಕೊಡುವುದು ಒಳ್ಳೆಯದಲ್ಲ. ಬದಲಾಗಿ ಅವರಿಗೂ ಅವಕಾಶ ಒದಗಿಸಿದರೆ ಉತ್ತಮ ಸಮಾಜ ರೂಪುಗೊಳ್ಳಲು ಸಾಧ್ಯ.ಜ್ಯೋತಿಷ್ ಅವರ ವಿಚಾರದಲ್ಲಿ ಜಿಲ್ಲಾ ಬಿಜೆಪಿ ಹಾಗೂ ಕುಂಬಳೆ ವ್ಯಾಪ್ತಿಯ ಬಿಜೆಪಿಯ ನಾಯಕರ ವಿಷಯದಲ್ಲಿ ಬೇಸತ್ತು  ಜಿಲ್ಲಾ ಉಪಾಧ್ಯಕ್ಷ ಶ್ರೀ ಪಿ ರಮೇಶ್,ಕಾಸರಗೋಡು ಯುವಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಕಿಶೋರ್

ಭಗವತಿ,ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಸಮಿತಿ ಸದಸ್ಯ ಅಡ್ವಕೇಟ್ ನವೀನ್ ರಾಜ್, ಪೈವಳಿಕೆ ಪಂಚಾಯತ್ ನಾರ್ತ್ ಸಮಿತಿಯ ಅಧ್ಯಕ್ಷ ಲೋಕೇಶ್ ನೋಂಡ, ಮೀಂಜ ಪಂಚಾಯತ್ ಬಿಜೆಪಿ ಕಮಿಟಿ ಸದಸ್ಯ ಯತೀಶ್ ಕೌಡೂರು,ಕರ್ಶಕ ಮೋರ್ಚಾ ಮಂಡಲ ಪ್ರಧಾನ ಕಾರ್ಯದರ್ಶಿ ಸುರೇಶ್ ಶೆಟ್ಟಿ ಹೇರೂರು,ಮೀಂಜ ಪಂಚಾಯತ್ ಪ್ರಧಾನ ಕಾರ್ಯದರ್ಶಿ ನವೀನ್ ಬೆಜ್ಜ, ಬಿಜೆಪಿ ಮಂಜೇಶ್ವರ ಮಂಡಲ ಸಮಿತಿಯ ಸೆಲ್ ಕೋರ್ಡಿನೇಟ್ ಆಗಿರುವ ಸಂತೋಷ್ ದೈಗೋಳಿ, ಬಿಜೆಪಿ ಯುವಮೋರ್ಚಾ ಕಾಸರಗೋಡು ಜಿಲ್ಲಾ ಸದಸ್ಯ ಮೋಹನ್ ಚಿಪ್ಪಾರು ಮೊದಲಾದ ಯುವ ಕಾರ್ಯಕರ್ತರು  ರಾಜೀನಾಮೆ ಕೊಟ್ಟು ಸಾಧಾರಣ ಕಾರ್ಯಕರ್ತರಾಗಿ ಕೆಲಸ ಮಾಡಲು ಮುಂದಾಗಿದ್ದಾರೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

Leave a Comment