ಕೊಲ್ಲಂ : ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಅಪರೂಪವಾದ ಖಾಯಿಲೆ ಪತ್ತೆಯಾಗಿದ್ದು, ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಈ ಸೋಂಕು ತಗುಲಿದೆ. ಸೋಂಕಿತ ಮಕ್ಕಳ ದೇಹದ ಮೇಲೆ ಗುಳ್ಳೆಗಳು ಕಂಡು ಬಂದಿದ್ದು ಮಾತ್ರವಲ್ಲದೆ, ಆ ಗುಳ್ಳೆಗಳು ಕೆಂಪು ಬಣ್ಣ ಹೊಂದಿದೆ. ಆದ ಕಾರಣ ಈ ಜ್ವರಕ್ಕೆ ಟೊಮ್ಯಾಟೊ ಜ್ವರ ಎಂದು ಹೆಸರಿಡಲಾಗಿದೆ.
ಕೇರಳದಲ್ಲಿ ಈ ಜ್ವರ ಜಾಸ್ತಿಯಾಗುವುದರಿಂದ, ಕೊಯಮತ್ತೂರಿನ ಜಿಲ್ಲಾಡಳಿತ
ಗಡಿಯಲ್ಲಿ ಕಟ್ಟೆಚ್ಚ ವಹಿಸಿ, ಸೋಂಕು ಬಾರದಂತೆ ಮುನ್ನೆಚ್ಚರಿಕೆ ವಹಿಸಿದೆ.














