ಕಾಸರಗೋಡು: ಉಪ್ಪಳದಲ್ಲಿ ಭೀಕರ ಅಪಘಾತ; ಕಾರು ಪಲ್ಟಿಯಾಗಿ ಮೂರು ಮಂದಿ ಸಾವು,ಓರ್ವ ಗಂಭೀರ

Coastal Bulletin
ಕಾಸರಗೋಡು: ಉಪ್ಪಳದಲ್ಲಿ ಭೀಕರ ಅಪಘಾತ; ಕಾರು ಪಲ್ಟಿಯಾಗಿ ಮೂರು ಮಂದಿ ಸಾವು,ಓರ್ವ ಗಂಭೀರ

ಮಂಗಳೂರು: ಕೇರಳದ ಕಾಸರಗೋಡು ಸಮೀಪದ ಉಪ್ಪಳದಲ್ಲಿ ಭೀಕರ ಅಪಘಾತ ಸಂಭವಿಸಿದೆ. ದುರ್ಘಟನೆಯಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿ ಓರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ.

ಜನಾರ್ದನ, ವರುಣ್, ಕೃಷ್ಣ ಮೃತ ದುರ್ದೈವಿಗಳು. ಕಾಸರಗೋಡು ಪೈವಳಿಕೆ ಬಾಯಿಕಟ್ಚೆಯ ನಿವಾಸಿಗಳಿದ್ದ ಕಾರು ಅಪಘಾತಕ್ಕೆ ಒಳಗಾಗಿದೆ. ಉಪ್ಪಳ ಬ್ರಿಡ್ಜ್ ಬಳಿ ಡಿವೈಡರ್​ಗೆ ಕಾರು ಡಿಕ್ಕಿ ಹೊಡೆದು ಪಲ್ಟಿಯಾಗಿದೆ.

ಕಾಸರಗೋಡು ತಲಪಾಡಿ ರಸ್ತೆಯಲ್ಲಿ

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. ಕಾಮಗಾರಿಗಾಗಿ ತಾತ್ಕಲಿಕವಾಗಿ ಅಲ್ಲಲ್ಲಿ ತಡೆಗೋಡೆ ಹಾಗೂ ಡಿವೈಡರ್ ನಿರ್ಮಾಣ ಮಾಡಲಾಗಿದೆ. ಡಿವೈಡರ್ ಗೊತ್ತಾಗದೆ ಚಾಲಕ ಡಿಕ್ಕಿ ಹೊಡೆದಿದ್ದಾನೆ. ಮಂಜೇಶ್ವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Comment