ದೇವರ ನಾಡು ಕೇರಳದಲ್ಲಿ ಸೌಜನ್ಯ ನ್ಯಾಯಕ್ಕಾಗಿ ಬೃಹತ್ ಜನಾಂದೋಲನ ಸಭೆ.ಕಾಸರಗೋಡು ಬಾಕ್ರಬೈಲಿನಲ್ಲಿ ಪ್ರಧಾನಿ ಮೋದಿಗೆ ಹಿಂದಿ ಭಾಷೆಯಲ್ಲೇ ಪ್ರಶ್ನಿಸಿದ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ.

Coastal Bulletin
ದೇವರ ನಾಡು ಕೇರಳದಲ್ಲಿ ಸೌಜನ್ಯ ನ್ಯಾಯಕ್ಕಾಗಿ ಬೃಹತ್ ಜನಾಂದೋಲನ ಸಭೆ.ಕಾಸರಗೋಡು ಬಾಕ್ರಬೈಲಿನಲ್ಲಿ ಪ್ರಧಾನಿ ಮೋದಿಗೆ ಹಿಂದಿ ಭಾಷೆಯಲ್ಲೇ ಪ್ರಶ್ನಿಸಿದ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ.

ಕಾಸರಗೋಡು : ಧರ್ಮಸ್ಥಳ ಪಾಂಗಳ ನಿವಾಸಿ ಸೌಜನ್ಯ ಅತ್ಯಾಚಾರವಾಗಿ ಕೊಲೆಗೈಯಲ್ಪಟ್ಟು ಹನ್ನೆರಡು ವರುಷ ಕಳೆದರೂ ನ್ಯಾಯ ಮಾತ್ರ ಮರೀಚಿಕೆಯಾಗಿದೆ.ಇಂದು ಕಾಸರಗೋಡು ತಾಲೂಕಿನ ಬಾಕ್ರಬೈಲು ಗ್ರಾಮದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಸೌಜನ್ಯ ಪರ ಹೋರಾಟಗಾರರು ಕೇಂದ್ರ,ರಾಜ್ಯ ಸರಕಾರಗಳ ನಡೆಯನ್ನು ತೀವ್ರವಾಗಿ ಖಂಡಿಸಿದರು.

ದೇಶದ ಪ್ರಧಾನಿ ಮೋದಿಯವರಿಗೆ ಹಿಂದಿ ಭಾಷೆಯಲ್ಲಿ ಪ್ರಶ್ನಿಸಿದ ಮಹೇಶ್ ಶೆಟ್ಟಿ ತಿಮರೋಡಿ ಅವರು ನಿಮ್ಮದೇ ಸರಕಾರ ರಾಜ್ಯದಲ್ಲಿ ಅಧಿಕಾರದಲ್ಲಿರುವಾಗ ನಡೆದಂತಹ ಅತ್ಯಾಚಾರ ಪ್ರಕರಣಕ್ಕೆ ಇದವರೆಗೆ ನ್ಯಾಯ ದೊರೆತಿಲ್ಲ ಭೇಟಿ ಬಚಾವು ಭೇಟಿ ಪಡಾವೋ ಅಂತ ಹೇಳ್ತೀರ ಆದರೆ ಭೇಟಿ ಬದುಕಿದ್ದರೆ ತಾನೇ ವಿದ್ಯೆ ಕಲಿಸಲು ಸಾಧ್ಯ ಎಂದು ಪ್ರಶ್ನಿಸಿದರು.ದೇಶದ ಒಂದು ಬಾಲಕಿ ಹಾಡು ಹೇಳಿದಾಗ ಟ್ವಿಟರ್ ಮೂಲಕ ಟ್ವೀಟ್ ಮಾಡಿದ ನೀವು 12 ವರ್ಷಗಳ ಹಿಂದೆ ಬರ್ಬರವಾಗಿ ಅತ್ಯಾಚಾರವಾದ ಸೌಜನ್ಯಳ ತಾಯಿಯ ನೋವು ನಿಮಗೆ ಅರ್ಥ ಆಗಲಿಲ್ಲವೇ ಎಂದರು.

ವಕೀಲ ಮೋಹಿತ್ ಅವರು ಮಾತನಾಡಿ ಅಮಾಯಕ

ಸಂತೋಷ್ ರಾವ್ ಅವರನ್ನು ಪ್ರಕರಣದಲ್ಲಿ ಸಿಲುಕಿಸಲು ಯತ್ನಿಸಿದರಾದರೂ ಸಿಬಿಐ ಕೋರ್ಟ್ ಅವರನ್ನು ಯಾವುದೇ ಸಾಕ್ಷಿಗಳ ಆಧಾರವಿಲ್ಲದೆ ಪ್ರಕರಣದಿಂದ ಮುಕ್ತಿಗೊಳಿಸಿದೆ ಹಾಗೂ ತನಿಖೆ ಹಾದಿ ತಪ್ಪಿಸಿದವರ ಮೇಲೆ ಕ್ರಮ ಕೈಗೊಳ್ಳಲು ಅಕ್ವಿಟಲ್ ಕಮಿಟಿ ನೇಮಿಸಿ ಅವರ ವಿರುದ್ಧ ಪ್ರಕರಣ ದಾಖಲಿಸಲು ತಿಳಿಸಿದೆ ಎಂದರು.


ವಿಡಿಯೋ ಲಿಂಕ್.https://youtu.be/6flB1P8pDow?si=lTDX8J6gnp3wxOw2

ಇಂದು ಪ್ರಥಮ ಬಾರಿ ಕೇರಳ ರಾಜ್ಯದಲ್ಲಿ ಸೌಜನ್ಯ ನ್ಯಾಯಪರ ಹೋರಾಟ ನಡೆಯಿತು.ವೇದಿಕೆಯಲ್ಲಿ ಸೌಜನ್ಯ ತಾಯಿ ಕುಸುಮಾವತಿ,ಹೋರಾಟಗಾರ್ತಿ ಪ್ರಸನ್ನ ರವಿ,ಗಿರೀಶ್ ಮಟ್ಟಣ್ಣನವರ್,ನೀತಿ ಸಂಘಟನೆಯ ಜಯಂತ್,ತಮ್ಮಣ್ಣ ಶೆಟ್ಟಿ,ದಿನೇಶ್ ಗಾಣಿಗ ಮೊದಲಾದವರು ಉಪಸ್ಥಿತರಿದ್ದರು.

Leave a Comment