ಬ್ರಹ್ಮರಕೂಟ್ಲು:ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಂದ ಶಾಲಾ ಪರಿಸರ, ಬಸ್ ನಿಲ್ದಾಣ ಸ್ವಚ್ಛತೆ ಹಾಗೂ ಸುಂದರೀಕರಣ

Coastal Bulletin
ಬ್ರಹ್ಮರಕೂಟ್ಲು:ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಂದ ಶಾಲಾ ಪರಿಸರ, ಬಸ್ ನಿಲ್ದಾಣ ಸ್ವಚ್ಛತೆ ಹಾಗೂ ಸುಂದರೀಕರಣ

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಬ್ರಹ್ಮರಕೂಟ್ಲು ಇಲ್ಲಿನ ಸ್ಕೌಟ್ಸ್, ಗೈಡ್ಸ್, ಭಾರತ್ ಸೇವಾದಳ ಹಾಗೂ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಒಗ್ಗೂಡಿ ಶಾಲಾ ಪರಿಸರ ಮತ್ತು ಶಾಲೆಯ ಪಕ್ಕದಲ್ಲಿರುವ ಬಸ್ ನಿಲ್ದಾಣಗಳನ್ನು ಸ್ವಚ್ಛಗೊಳಿಸಿ, ಬಣ್ಣ ಬಳಿದು ಸುಂದರ ಚಿತ್ರಗಳನ್ನು ಬಿಡಿಸುವ ಮೂಲಕ ಆಕರ್ಷಕವಾಗಿ ರೂಪಿಸಿದರು.

ಈ ಸ್ವಚ್ಛತಾ ಹಾಗೂ ಸುಂದರೀಕರಣ ಕಾರ್ಯಕ್ಕೆ ಶಾಲಾ ಮುಖ್ಯ ಶಿಕ್ಷಕಿ ಅಪೋಲಿನ್ ಲೀನಾ ಮತ್ತು ಸ್ಕೌಟ್ಸ್ ಶಿಕ್ಷಕಿ ವೇದಾವತಿ ನೇತೃತ್ವ ವಹಿಸಿದ್ದರು.

ಜಿಲ್ಲಾ ಸ್ಕೌಟ್ಸ್ ಆಯುಕ್ತ ಮೊಹಮ್ಮದ್ ತುಂಬೆ, ಕಾರ್ಯದರ್ಶಿ ಪ್ರತಿಮಾ, ಶಾಲಾ ಶಿಕ್ಷಕಿ ಭಾರತಿ ಶೇಷಪ್ಪ ಹಾಗೂ ಶಿಕ್ಷಕ ತರಬೇತಿಯಲ್ಲಿರುವ ಕು. ವೈಶಾಲಿ ಮತ್ತು ಕು. ಚೈತ್ರ ಸಹಕರಿಸಿದರು.

ಮಕ್ಕಳ

ಈ ಸಮಾಜಮುಖಿ ಶ್ರಮದಾನ ಕಾರ್ಯಕ್ಕೆ ಊರಿನ ಜನರು ಮುಕ್ತಕಂಠದಿಂದ ಮೆಚ್ಚುಗೆ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳ ಉತ್ಸಾಹವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸ್ಥಳೀಯರು ಲಘು ಉಪಾಹಾರ, ತಂಪು ಪಾನೀಯ, ಕಬ್ಬಿನ ಹಾಲು ಹಾಗೂ ಐಸ್‌ಕ್ರೀಂ ವಿತರಿಸಿ ಸಂತಸ ಹಂಚಿಕೊಂಡರು.

ಶ್ರಮದಾನದ ಮೂಲಕ ಸ್ವಚ್ಛತೆ, ಪರಿಸರ ಕಾಳಜಿ ಮತ್ತು ಸಾಮಾಜಿಕ ಜವಾಬ್ದಾರಿಯ ಮಹತ್ವವನ್ನು ವಿದ್ಯಾರ್ಥಿಗಳು ಸಾರಿದರು.

Leave a Comment