Coastal Bulletin

ತಿರುವನಂತಪುರಂ :ಕೇರಳದ ಮಾಜಿ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಟೀಚರ್‌ಗೆ ಕೇರಳದಲ್ಲಿ ಸಾಂಕ್ರಾಮಿಕ ಆರೋಗ್ಯ ಬಿಕ್ಕಟ್ಟಿನ ದಿನಗಳಲ್ಲಿ ಅವರ ಕೆಲಸ, ನಾಯಕತ್ವವನ್ನು ಗುರುತಿಸಿ ಪ್ರತಿಷ್ಟಿತ ಸೆಂಟ್ರಲ್ ಯುರೋಪಿಯನ್ ವಿಶ್ವವಿದ್ಯಾಲಯ (CEU) ನೀಡುವ ಓಪನ್ ಸೊಸೈಟಿ ಪ್ರಶಸ್ತಿ ನೀಡಿ ಗೌರವಿಸಿದೆ. ಆಸ್ಟ್ರೇಲಿಯಾದ ವಿಯೆನ್ನಾದಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮಾಜಿ ಆರೋಗ್ಯ ಸಚಿವರು "ನಾನು ಇಲ್ಲಿ ಪ್ರಶಸ್ತಿ ಪಡೆಯುತ್ತಿರುವಾಗ ಜಗತ್ತು ಸಾಂಕ್ರಾಮಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಕೇರಳದಲ್ಲಿ ಸಾಂಕ್ರಾಮಿಕ ರೋಗವನ್ನು ಎದುರಿಸಲು ನಾವು ಒಂದು ಕಾರ್ಯತಂತ್ರವನ್ನು

ರೂಪಿಸಿದಾಗ ಅದು ಜನರಿಗೆ ಸರ್ಕಾರದ ಹೊಣೆಗಾರಿಕೆಯನ್ನು ಭದ್ರಪಡಿಸುವುದರ ಮೇಲೆ ಕೇಂದ್ರೀಕರಿಸಬೇಕಾಗಿತ್ತು. ನಾಗರಿಕ ಸಮಾಜದೊಂದಿಗೆ ಸಹಭಾಗಿತ್ವದಲ್ಲಿ ಕೆಲಸ ಮಾಡುವ ಮೂಲಕ ಅದನ್ನು ಜಾರಿಗೆ ತರಬೇಕು ಎಂಬುದು ತಿಳಿದಿತ್ತು' ಎಂದು ಹೇಳಿದರು.

Leave a Comment