ಇರಾನ್ ನೂತನ ಸುಪ್ರೀಂ ನಾಯಕರಾಗಿ ಖಮೇನಿ ಪುತ್ರ ಮೊಜ್ತಬಾ ಖಮೇನಿ ಆಯ್ಕೆ

Coastal Bulletin
ಇರಾನ್ ನೂತನ ಸುಪ್ರೀಂ ನಾಯಕರಾಗಿ ಖಮೇನಿ ಪುತ್ರ ಮೊಜ್ತಬಾ ಖಮೇನಿ ಆಯ್ಕೆ

ಟೆಹ್ರಾನ್​: ಇತ್ತೀಚೆಗೆ ಹತ್ಯೆಗೀಡಾದ ಇರಾನ್​ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಮಗ ಅಯತೊಲ್ಲಾ ಮೊಜ್ತಬಾ ಖಮೇನಿ ಅವರನ್ನು ದೇಶದ ನೂತನ ಸುಪ್ರೀಂ ನಾಯಕನನ್ನಾಗಿ ಇರಾನ್​ ಆಡಳಿತದ ತಜ್ಞರ ಮಂಡಳಿ ಭಾನುವಾರ ನೇಮಕ ಮಾಡಿದೆ.

ಅಮೆರಿಕ - ಇಸ್ರೇಲ್​ ದಾಳಿಯಲ್ಲಿ ಹಿರಿಯ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರು ಹತ್ಯೆಯಾದ ಒಂಬತ್ತು ದಿನಗಳ ನಂತರ ಸರ್ಕಾರದ ತಜ್ಞರ ಸಭೆಯಲ್ಲಿ ತಮ್ಮ ಮುಂದಿನ ನಾಯಕನನ್ನು ಆಯ್ಕೆ ಮಾಡಲಾಯಿತು.

ಖಮೇನಿ ಅವರ ಎರಡನೇ ಪುತ್ರ 56 ವರ್ಷದ ಮೊಜ್ತಬಾ ಖಮೇನಿ ಅವರನ್ನು ತಜ್ಞರ ಮಂಡಳಿಯ ಸದಸ್ಯರ ನಿರ್ಣಾಯಕ ಮತದ ಆಧಾರದ ಮೇಲೆ ಇರಾನ್ ಇಸ್ಲಾಮಿಕ್ ಗಣರಾಜ್ಯದ ಮೂರನೇ ನಾಯಕರನ್ನಾಗಿ ನೇಮಕ ಮಾಡಲಾಗಿದೆ ಎಂದು ಕ್ಲರಿಕಲ್ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.

ಅಮೆರಿಕದ ಕ್ರೂರ ಆಕ್ರಮಣದ ಹೊರತಾಗಿಯೂ, ಹೊಸ ನಾಯಕನನ್ನು ಆಯ್ಕೆ ಮಾಡುವಲ್ಲಿ ಧರ್ಮಗುರುಗುಳ ಸಮಿತಿ ಒಂದು ನಿಮಿಷವೂ ಹಿಂಜರಿಯಲಿಲ್ಲ ಎಂದು ಅದು ಹೇಳಿದೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಕಿರಿಯ ಖಮೇನಿ ಅವರನ್ನು ಹಗುರ ವ್ಯಕ್ತಿ ಎಂದು ತಳ್ಳಿಹಾಕಿದ್ದರು. ಮತ್ತು ಹೊಸ ನಾಯಕನ ನೇಮಕಾತಿಯಲ್ಲಿ

ಅವರ ಪಾತ್ರ ಇರಬೇಕು ಎಂದು ಭಾನುವಾರ ಹೇಳಿದ್ದರು. ಅವರು ನಮ್ಮಿಂದ ಅನುಮೋದನೆ ಪಡೆಯದಿದ್ದರೆ ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ನೂತನ ನಾಯಕನನ್ನು ಘೋಷಣೆ ಮಾಡುವ ಕೆಲವೇ ಹೊತ್ತು ಮೊದಲು ಟ್ರಂಪ್​ ಎಬಿಸಿ ನ್ಯೂಸ್‌ಗೆ ತಿಳಿಸಿದ್ದರು.

ಆದರೆ ಟೆಹ್ರಾನ್‌ನ ಉನ್ನತ ರಾಜತಾಂತ್ರಿಕರು ಭಾನುವಾರ ನೂತನ ನಾಯಕನ ಆಯ್ಕೆ ನಿರ್ಧಾರ ಇರಾನ್‌ನದ್ದೇ. ನಮ್ಮ ದೇಶೀಯ ವ್ಯವಹಾರಗಳಲ್ಲಿ ಯಾರೂ ಹಸ್ತಕ್ಷೇಪ ಮಾಡಲು ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ನೂತನ ಸುಪ್ರೀಂ ನಾಯಕನ ಆಯ್ಕೆ ಬೆನ್ನಲ್ಲೇ ಇರಾನ್ ದಾಳಿ: ನೂತನ ಸುಪ್ರೀಂ ನಾಯಕರಾಗಿ ಮೊಜ್ತಬಾ ಖಮೇನಿ ಅವರು ಆಯ್ಕೆಯಾದ ಬೆನ್ನಲ್ಲೇ ಇಸ್ರೇಲ್ ಮೇಲೆ ಸೋಮವಾರ ಬೆಳಗ್ಗೆ ಇರಾನ್ ದಾಳಿ ಮಾಡಿದೆ. ಹಾಗೆಯೇ ಕತಾರ್ನಲ್ಲಿಯೂ ಇಂದು ಸ್ಫೋಟ ಸದ್ದು ಕೇಳಿಬಂದಿದೆ. ನೂತನ ಸುಪ್ರೀಂ ನಾಯಕನ ಹೆಸರಲ್ಲಿ ಇರಾನ್ ಇಂದು ದಾಳಿ ಮಾಡಿ ಎಚ್ಚರಿಕೆ ನೀಡಿದೆ.

Leave a Comment