ಬಂಟ್ವಾಳ: ಜೈವಿಕ ಕೃಷಿ ಪದ್ಧತಿಯನ್ನು ಮರೆತ ಪರಿಣಾಮ ಭೂ ಸಂಪತ್ತು ನಾಶವಾಗುತ್ತಿದೆ. ಭೂಮಿಗೆ ಪುನಃ ಶಕ್ತಿ ಬರಬೇಕಾದರೆ ರಾಸಾಯನಿಕಗಳ ಬಳಕೆಯನ್ನು ಕಡಿಮೆ ಮಾಡಿ, ಮೂಲ ಕೃಷಿ ಪದ್ಧತಿಗಳತ್ತ ಮರಳಬೇಕಾಗಿದೆ. ಆಹಾರ ಶುದ್ಧವಾಗದೆ ಬುದ್ಧಿ ಶುದ್ಧವಾಗಲು ಸಾಧ್ಯವಿಲ್ಲ,ಸಾವಯವ ಕೃಷಿಕರು ಬೆಳೆದ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಕಲ್ಪಿಸುವ ನಿಟ್ಟಿನಲ್ಲಿ ವಾರದ ಸಾವಯವ ಸಂತೆ ಮಹತ್ವದ ವೇದಿಕೆಯಾಗಲಿದೆ, ಮೂಲ ಪದ್ಧತಿಯೊಂದಿಗೆ ಸಾವಯವ ಕೃಷಿ ಮತ್ತು ಸಾವಯವ ಸಂತೆ ಯಶಸ್ವಿಯಾಗಿ ಮುಂದುವರಿಯುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ ಎಂದು ರಾಧಾ ಸುರಭಿ ಗೋ ಮಂದಿರದ ಭಕ್ತಿಭೂಷಣ್ ಪ್ರಭುಜೀ ಹೇಳಿದರು.
ಅವರು ಸಾವಯವ ಕೃಷಿಗೆ ಉತ್ತೇಜನ ಕೊಡುವ ನಿಟ್ಟಿನಲ್ಲಿ ಗ್ರಾಮ ವಿಕಾಸ ಪ್ರತಿಷ್ಠಾನ ನೆತ್ತರಕೆರೆ ಹಾಗೂ ಸಮೃದ್ಧಿ ದೀನಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಇದರ ಆಶ್ರಯದಲ್ಲಿ ರೈತರು ಬೆಳೆದ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ‘ವಾರದ ಸಂತೆ’ಯನ್ನು ಉದ್ಘಾಟಿಸಿ ಮಾತನಾಡಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಗತಿಪರ ಕೃಷಿಕ ಮುಂಡಾಜೆಗುತ್ತು ಜ್ಯೋತಿಂದ್ರ ಶೆಟ್ಟಿ,ಲಕ್ಷ್ಮಿಕಾಂತ್ ನಾಯಕ್ ಕೊಡ್ಮಾಣ್, ಶಿಕ್ಷಣ ತಜ್ಞ ದೇವದಾಸ್ ಕೊಡ್ಮಾಣ್, ಸಂಸ್ಕಾರ ಭಾರತೀ ಜಿಲ್ಲಾಧ್ಯಕ್ಷ ತಾರಾನಾಥ ಕೊಟ್ಟಾರಿ, ಪೂರ್ಣಿಮಾ ತಾರಾನಾಥ ಕೊಟ್ಟಾರಿ, ನವೋದಯ ಮಿತ್ರ ಕಲಾ ವೃಂದದ ಅಧ್ಯಕ್ಷ ಜಗದೀಶ ಎನ್, ಮಾಜಿ ಅಧ್ಯಕ್ಷ ಬಿ ಸುರೇಶ ಭಂಡಾರಿ ಅರ್ಬಿ, ಗೌರವಾಧ್ಯಕ್ಷ ಪಿ ಸುಬ್ರಮಣ್ಯ
ರಾವ್, ಮೇರಮಜಲು ಗ್ರಾ ಪಂ ನಿಕಟಪೂರ್ವ ಅಧ್ಯಕ್ಷ ಸತೀಶ ನಾಯ್ಗ ಕೊಡ್ಮಾಣ್ ಕೊಡಿ,ಬಾಲ ಗೋಕುಲ ವಿಭಾಗ ಟೋಳಿ ಸದಸ್ಯೆ ಲತಾ ತುಂಬೆ,ಗ್ರಾಮ ವಿಕಾಸ ಪ್ರತಿಷ್ಠಾನದ ಸಂಯೋಜಕ ಸಂತೋಷ್ ಕುಮಾರ್, ಭಾಸ್ಕರ್ ಕುಲಾಲ್ ನೆತ್ತರಕೆರೆ, ಗೋಪಾಲ್ ಗೋವಿಂದೋಟ,ರಘುನಾಥ ಸಪಲ್ಯ ಹೊಳ್ಳರಬೈಲು, ಜಗದೀಶ ಕಡೆಗೋಳಿ, ಉಪಸ್ಥಿತರಿದ್ದರು.
ಮಂಗಳೂರು ಜಿಲ್ಲಾ ಗ್ರಾಮಾಂತರ ಗ್ರಾಮ ವಿಕಾಸ ಸಂಯೋಜಕ ದಾಮೋದರ ನೆತ್ತರಕೆರೆ ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು, ಸಮೃದ್ಧಿ ದೀನಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷ ಶ್ರೀಧರ ಹೆಚ್ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ವಿವಿಧ ಸಾವಯವ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಚಾಲನೆ ನೀಡಲಾಯಿತು, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಹಾಗೂ ಸ್ಪಂದನೆ ವ್ಯಕ್ತವಾಯಿತು.











