ಸಿದ್ದಕಟ್ಟೆ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ. 720.47ಕೋಟಿ ವ್ಯವಹಾರ 2.19 ಕೋಟಿ ಲಾಭ ಶೇ 12 ಲಾಭಾಂಶ:ಪ್ರಭಾಕರ ಪ್ರಭು.

Coastal Bulletin
ಸಿದ್ದಕಟ್ಟೆ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ. 720.47ಕೋಟಿ ವ್ಯವಹಾರ 2.19 ಕೋಟಿ ಲಾಭ ಶೇ 12 ಲಾಭಾಂಶ:ಪ್ರಭಾಕರ ಪ್ರಭು.

ಬಂಟ್ವಾಳ :ಸಂಘವು ಗತ ವರ್ಷದಲ್ಲಿ ವಿವಿಧ ರೀತಿಯಲ್ಲಿ 133.63 ಕೋಟಿ ಸಾಲ ವಿತರಸಿ,   720.47ಕೋಟಿ ವ್ಯವಹಾರದೊಂದಿಗೆ 2.19 ಕೋಟಿ ಲಾಭಗಳಿಸಿ  ಸಂಘದ ಸದಸ್ಯರಿಗೆ ಶೇ 12 ರಷ್ಟು ಲಾಭಾಂಶ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಹೇಳಿದರು.

ಅವರು ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕೃಷ್ಣ ರೈ ರೈತ ಸಭಾಂಗಣದಲ್ಲಿ  ಜರಗಿದ ಸಂಘದ 2025-26 ನೇ ಸಾಲಿನ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಂಘದಲ್ಲಿ 3904 ‘ಎ’ ತರಗತಿ ಸದಸ್ಯರು , 1981 ‘ಡಿ ‘ ತರಗತಿ ಸದಸ್ಯರು ಸೇರಿದಂತೆ ಒಟ್ಟು 5885  ಸದಸ್ಯರನ್ನು ಹೊಂದಿದ್ದು,ವರದಿ ವರ್ಷದಲ್ಲಿ 2299  ಮಂದಿ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 49.82 ಕೋಟಿ ಸಾಲವನ್ನು ಮಂಗಳಾ ಕಿಸಾನ್ ಕಾರ್ಡ್ ಮೂಲಕ ವಿತರಿಸಲಾಗಿದ್ದು, ಶೇ 3 ಬಡ್ಡಿದರದಲ್ಲಿ ಕೃಷಿ ಅಭಿವೃದ್ದಿಗಾಗಿ 391 ಮಂದಿ ರೈತರಿಗೆ 12.77 ಕೋಟಿ ಸಾಲ ನೀಡಲಾಗಿದೆ . ಹೈನುಗಾರಿಕೆಗೆ ಪ್ರೋತ್ಸಾಹ ನೀಡುವ ಸಲುವಾಗಿ ಹಸುಗಳ ನಿರ್ವಹಣೆಗಾಗಿ ಶೂನ್ಯ ಬಡ್ಡಿದರದಲ್ಲಿ 3.60  ಕೋಟಿ ನೀಡಲಾಗಿದೆ. ಜಮೀನು ಅಡಮಾನ ಸಾಲ ಮತ್ತು ವೈಯಕ್ತಿಕ ಸಾಲ ಸೇರಿದಂತೆ ಒಟ್ಟು 27.91 ಕೋಟಿ ಸಾಲ ವಿತರಿಸಲಾಗಿದೆ. ಒಟ್ಟಿನಲ್ಲಿ 2788 ಸದಸ್ಯರಿಗೆ 152.24 ಕೋಟಿ ಸಾಲವನ್ನು ನೀಡಲಾಗಿದೆ ಎಂದರು.

ಸಹಕಾರ ಸಂಘಗಳು  ಸದಸ್ಯರಿಗೆ ಆರ್ಥಿಕ ವ್ಯವಹಾರಗಳಲ್ಲದೇ ಸಂಘದ ವ್ಯಾಪ್ತಿಯಲ್ಲಿ ಬರುವ ವಿವಿಧ ಕ್ಷೆತ್ರಗಳಿಗೆ ಪೂರಕವಾಗಿ ಸಹಕಾರ ಮಾಡಿದಾಗ ಸಮಾಜ ಅಭಿವೃದ್ಧಿಗೊಳ್ಳಲು ಸಾಧ್ಯ ಈ ನಿಟ್ಟಿನಲ್ಲಿ ಈ ವರ್ಷ ನಮ್ಮ ಸಹಕಾರ ಸಂಘವು ದೇಶದಾದ್ಯಂತ ಆಚರಣೆಯಲ್ಲಿರುವ ಪಂಚ ಪರಿವರ್ತನೆಗಳಿಗೆ ಆದ್ಯತೆ ನೀಡಲಾಗಿದ್ದು  ಅದರಲ್ಲಿ ಪರಿಸರ ಸಂರಕ್ಷಣೆಯು ಒಂದು ಭಾಗವಾಗಿದ್ದು ಮನುಷ್ಯನ ಅರೋಗ್ಯದ ದ್ರಷ್ಟಿಯಲ್ಲಿ ಶುದ್ಧವಾದ ಗಾಳಿಯ ಸೇವನೆಯ ಅವಶ್ಯಕತೆಗಾಗಿ ಪ್ರತಿಯೊಬ್ಬರು ತಮ್ಮ ಹಿರಿಯರ ಹೆಸರಲ್ಲಿ ಗಿಡ ನೆಟ್ಟು ಪರಿಸರ ರಕ್ಷಣೆ ಮಾಡುವುದರೊಂದಿಗೆ ಸ್ವಚ್ಛ ಪರಿಸರದ ನಿರ್ಮಾಣಕ್ಕಾಗಿ ಮಹತ್ವ ನೀಡಲಾಗಿದೆ

ಆತ್ಮ ನಿರ್ಭರ ಭಾರತ ಸಂಕಲ್ಪ ಅಭಿಯಾನ ಅಡಿಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ಬರುವ ಸಹಕಾರಿಗಳು ಮತ್ತು ಗ್ರಾಹಕರಿಗೆ ದೇಶಿಯ ಉತ್ಪನ್ನಗಳ ಉತ್ಪಾದನೆ ಮತ್ತು ಬಳಕೆ ಮಾಡಲು ಉತ್ತೇಜನ ನೀಡಬೇಕು ಎಂದರು.ಮುಂದಿನ ದಿನಗಳಲ್ಲಿ ಸಂಘದ ಕೇಂದ್ರ ಕಚೇರಿಯ ಆವರಣದಲ್ಲಿ ಸಾಮಾನ್ಯ ಸೇವಾ ಕೇಂದ್ರ ತೆರೆಯುವ ಮೂಲಕ ಜನಸಾಮಾನ್ಯರಿಗೆ ಸಿಗುವ ಎಲ್ಲಾ ಸೇವೆಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು.

ಸಂಘವು ನಿರಂತರವಾಗಿ ಪ್ರಗತಿ ಸಾಧಿಸಿದ್ದಕ್ಕಾಗಿ ದ.ಕ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಮೆಚ್ಚುಗೆ ವ್ಯಕ್ತ ಪಡಿಸಿದ್ದು ಸತತವಾಗಿ ಪ್ರಶಸ್ತಿ ಪುರಸ್ಕಾರಕ್ಕೆ ಪಾತ್ರವಾಗಿದೆ.

2025-26 ನೇ ಸಾಲಿನಲ್ಲಿ ಯಶಸ್ವಿನಿ ಆರೋಗ್ಯ ರಕ್ಷಣೆ ಯೋಜನೆಯನ್ವಯ 612 ಕುಟುಂಬಗಳ 2307  ಸದಸ್ಯರು ನೋಂದಣಿ ಮಾಡಿಸಲಾಗಿದ್ದು,ಒಟ್ಟು 4.23 ಲಕ್ಷ ಪ್ರೀಮಿಯಂ

ಮೊತ್ತವನ್ನು ಸರಕಾರಕ್ಕೆ ಪಾವತಿಸಲಾಗಿದೆ.

ಲೆಕ್ಕ ಪರಿಶೋಧನೆಯಲ್ಲಿ ಸತತವಾಗಿ ‘ಎ’ ಗ್ರೇಡ್ ಬಂದಿದ್ದು,ಶೇ 98 ಸಾಲ ವಸೂಲಾತಿ ಪ್ರಗತಿ ಸಾಧಿಸಲಾಗಿದ್ದು , ಪ್ರಸಕ್ತ ಸಾಲಿನಲ್ಲಿ ಶೆ 100 ಸಾಲ ವಸೂಲಾತಿ ಸಾಧಿಸುವಲ್ಲಿ ಸದಸ್ಯರು ಸಹಕಾರ ನೀಡಬೇಕೆಂದರು.

ಮರಣ ಹೊಂದಿದ ಸಂಘದ ಸದಸ್ಯರಿಗೆ ನುಡಿನಮನ:

ಸಂಘದಲ್ಲಿ ಸದಸ್ಯರಾಗಿದ್ದು,ಮರಣ ಹೊಂದಿದ 38 ಸದಸ್ಯರಿಗೆ ಮಹಾಸಭೆಯಲ್ಲಿ  ಮೌನ ಪ್ರಾರ್ಥನೆ ಮೂಲಕ ನುಡಿ ನಮನ ಸಲ್ಲಿಸಿಲಾಯಿತು.

ಪ್ರಧಾನ ಕಛೇರಿ ಸೇರಿದಂತೆ ರಾಯಿ ,ಆರಂಬೋಡಿ,ಮಾವಿನ ಕಟ್ಟೆ ,ಅರಳ ಶಾಖೆಗಳು ಉತ್ತಮ ಸೇವೆ ಸಲ್ಲಿಸುತ್ತಿದ್ದು,ಸದಸ್ಯರ ಪ್ರತಿಕ್ರಿಯೆ ಧನಾತ್ಮಕವಾಗಿ ಲಾಭದತ್ತ ಸಾಗುತ್ತಿದೆ.

ವೇದಿಕೆಯಲ್ಲಿ  ನಿರ್ದೇಶಕರಾದ ಸತೀಶ್ ಪೂಜಾರಿ,, ರಶ್ಮಿತ್ ಶೆಟ್ಟಿ  ಚಂದ್ರಶೇಖರ ಶೆಟ್ಟಿ , ವೀರಪ್ಪ ಪರವ, ಜಾರಪ್ಪ ನಾಯ್ಕ,  ,ಶ್ರೀಮತಿ ಮಂದರಾತಿ ಎಸ್ ಶೆಟ್ಟಿ, ಶ್ರೀಮತಿ  ಪುಷ್ಪಲತಾ ಎಸ್ ಆರ್,ವಿಶ್ವನಾಥ್ ಶೆಟ್ಟಿಗಾರ್, ಶಿವ ಗೌಡ, ವೃತ್ತಿ ಪರ ನಿರ್ದೇಶಕರಾದ ರಾಜೇಶ್ ಶೆಟ್ಟಿ  ಕೊನೆರಬೆಟ್ಟು,ನವೀನ್ ಹೆಗ್ಡೆ ಉಪಸ್ಥಿತರಿದ್ದರು. ಮಹಾಸಭೆಯಲ್ಲಿದಕ್ಷಿಣ ಕನ್ನಡ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಎಚ್ ಪ್ರಭಾಕರ,ಸಿದ್ದಕಟ್ಟೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ರತ್ನಕುಮಾರ್ ಚೌಟ, ಕುಕ್ಕಿಪಾಡಿ ಗ್ರಾಮ ಪಂಚಾಯತ್  ಮಾಜಿ ಅಧ್ಯಕ್ಷ ಶೇಖರ್ ಶೆಟ್ಟಿ,

ರಾಯಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸಂತೋಷ ಕುಮಾರ್ ಸಂಗಬೆಟ್ಟು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಸುರೇಶ ಕುಲಾಲ್, ಸಿದ್ದಕಟ್ಟೆ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ ಕಿರಣ್ ಕುಮಾರ್ ಮಂಜಿಲ, ಪ್ರಮುಖರಾದ ಸುದರ್ಶನ್ ಮಂಜಿಲ,ಡಾ! ಶ್ರೀಧರ್ ಶೆಟ್ಟಿ, ಲಕ್ಷ್ಮೀಧರ ಶೆಟ್ಟಿ, ಜಗದೀಶ್ ಆಳ್ವ, ರಂಜನ್ ಕುಮಾರ್ ಶೆಟ್ಟಿ,  ಡೊಂಬಯ ಅರಳ,ಲಿಂಗಪ್ಪ ಪೂಜಾರಿ,ನಾರಯಣ ನಾಯಕ್,ಕೆ, ಸದಾಶಿವ ಕರ್ಪೆ,ಹರೀಶ್ ಆಚಾರ್ಯ, ಉಮೇಶ್ ಗೌಡ,ಅರುಣಾ ಶೆಟ್ಟಿ, ವಸಂತ ಗೌಡ, ಮಾದವ ಶೆಟ್ಟಿಗಾರ್,ಚಂದ್ರಶೇಖರ ಗೌಡ,ಗೋಪಾಲ ರೈ, ಜಯರಾಮ ಅಡಪ  ಹಾಗೂ ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.

ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಆರತಿ ಶೆಟ್ಟಿ ವಾರ್ಷಿಕ ವರದಿ ಪ್ರಸ್ತಾಪಿಸಿ,ಸಂಘದ ಉಪಾಧ್ಯಕ್ಷ ಸಂದೇಶ್ ಶೆಟ್ಟಿ ಪೊಡುಂಬ  ಸ್ವಾಗತಿಸಿ, ಸಹಾಯಕ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮಲ್ಲಿಕಾ  ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ದಿನೇಶ್ ಪೂಜಾರಿ ಧನ್ಯವಾದ ಸಮರ್ಪಿಸಿದರು .

ಸಂಘದ ಪ್ರತಿಯೊಬ್ಬ ಸದಸ್ಯರಿಗೂ ಒಂದೊಂದು ಹಲಸಿನ ಗಿಡವನ್ನು ವೇದಿಕೆಯಲ್ಲಿ ಸಾಂಕೇತಿಕವಾಗಿ ನೀಡಿದ್ದು,ಸುಮಾರು 3000 ಗಿಡಗಳನ್ನು  ಸದಸ್ಯರಿಗೆ ವಿತರಣೆ ಮಾಡಲಾಯಿತು ಹಾಗೂ ಪ್ರಧಾನ ಮಂತ್ರಿ ಜನ ಔಷಧಿ ಸಿದ್ದಕಟ್ಟೆ ಘಟಕದ ವತಿಯಿಂದ ಸಂಘದ ವಠಾರದಲ್ಲಿ ಆಶಕ್ತ ಸದಸ್ಯರಿಗೆ ಸಕ್ಕರೆ ತಪಾಷಣೆ, ಬ್ಲೆಡ್ ಫ್ರೆಶರ್ ತಪಾಷಣೆ ಯೊಂದಿಗೆ ಉಚಿತ ಅರೋಗ್ಯ ತಪಾಷಣೆ ಮಾಡಲಾಯಿತು.ಈ ವ್ಯವಸ್ಥೆ  ಸದಸ್ಯರಿಂದ ಬಗ್ಗೆ ವ್ಯಾಪಕ ಪ್ರಶಂಸೆ ವ್ಯಕ್ತಪಡಿಸಿದ್ದಾರೆ"

Leave a Comment