ಕೊಡ್ಮಾಣ್ :38ನೇ ವರ್ಷದ ಶಾರದಾ ಪೂಜಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ.

Coastal Bulletin
ಕೊಡ್ಮಾಣ್ :38ನೇ ವರ್ಷದ ಶಾರದಾ ಪೂಜಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ.

ಬಂಟ್ವಾಳ: ಶ್ರೀ ಶಾರದಾ ಪೂಜಾ ಸೇವಾ ವೇದಿಕೆ ಕೊಡ್ಮಾಣ್ ಇದರ ಆಶ್ರಯದಲ್ಲಿ ಅ.16ರಿಂದ 19ರವರೆಗೆ ನಡೆಯಲಿರುವ 38ನೇ ವರ್ಷದ ಶ್ರೀ ಶಾರದಾ ಪೂಜಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಸೆ. 20ರಂದು ಕೊಡ್ಮಾಣ್ ಶಾಲೆಯಲ್ಲಿ ನಡೆಯಿತು.

ಉದ್ಯಮಿ ಉಮೇಶ್ ಸಾಲ್ಯಾನ್ ಬೆಂಜನಪದವು ಅವರು ದೀಪ ಬೆಳಗಿಸಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ, ಮಹೋತ್ಸವಕ್ಕೆ ಶುಭ ಹಾರೈಸಿದರು.

ಈ ಸಂದರ್ಭ ಸತೀಶ್ ನಾಯ್ಕ ಕೊಡ್ಮಾಣ್ ಕೋಡಿ, ಪದ್ಮನಾಭ ಶೆಟ್ಟಿ ಕೊಟ್ಟಿಂಜ, ಲಕ್ಷ್ಮಿಕಾಂತ್ ನಾಯಕ್ ಕೊಡ್ಮಾಣ್ ಹೈಟ್ಸ್, ಕೆ.ಆರ್. ದೇವದಾಸ್ ಮಾಸ್ಟರ್,

ರಾಧಾಕೃಷ್ಣ ತಂತ್ರಿ ಬೆಂಜನಪದವು, ಗೋಪಾಲ್ ಕುಲಾಲ್ ಗೋವಿಂದೋಟ, ಪವನ್ ಕುಮಾರ್ ಅಬ್ಬೆಟ್ಟು, ಮಹಾಬಲ ಶೆಟ್ಟಿ ಕೊಡ್ಮಾಣ್, ಲೀಲಾವತಿ ಕಲ್ಲಜಾಲ್, ವೇದಿಕೆಯ ಕಾರ್ಯದರ್ಶಿ ಹರೀಶ್ ಕುಮಾರ್ ಕಲ್ಲಜಾಲ್, ಕೋಶಾಧಿಕಾರಿ ಸಚಿನ್ ಪೂಜಾರಿ ಕೊಡ್ಮಾಣ್ ಸೇರಿದಂತೆ ಪದಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Leave a Comment